×
Ad

ಬಾಂಬ್ ಭಯದಿಂದ ನಿಂತ ಜೆಟ್ ಏರ್ ವೇಸ್ ವಿಮಾನ !

Update: 2016-04-20 13:08 IST

ಅಹಮದಾಬಾದ್ : ಬುಧವಾರ ಮುಂಬೈನಿಂದ ಅಹಮದಾಬಾದ್ ನಗರಕ್ಕೆಹೊರಟಿದ್ದ 125 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿಯನ್ನುಹೊತ್ತ ಜೆಟ್ ಏರ್ ವೇಸ್ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆಯೆಂಬ ಎಚ್ಚರಿಕೆಯ ಸಂದೇಶ ಬಂದ ಹಿನ್ನೆಲೆಯಲ್ಲಿ ವಿಮಾನ ಅಹಮದಾಬಾದ್ ನಿಲ್ದಾಣದಲ್ಲಿ ಇಳಿದಕೂಡಲೇಅದನ್ನು ಐಸೊಲೇಶನ್ ಬೇ ಪ್ರದೇಶಕ್ಕೆ ಳಾಂತರಿಸಲಾಯಿತು.

ಅಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಇಳಿಸಿ ಅವರನ್ನುಹಾಗೂ ಅವರಲ್ಲಿದ್ದ ಬ್ಯಾಗೇಜುಗಳನ್ನು ಕೂಲಂಕಷವಾಗಿ ತಪಾಸಣೆಗೈಯ್ಯಲಾಗಿದ್ದು ನಂತರ ಸುರಕ್ಷಾ ಸಿಬ್ಬಂದಿಗಳು ವಿಮಾನವನ್ನೂ ತಪಾಸಿಸಿದರು.

ತನ್ನ ಪ್ರಯಾಣಿಕರಿಗೆ ಆದ ಅನಾನುಕೂಲತೆಗೆ ಜೆಟ್ ಏರ್ ವೇಸ್ ವಿಷಾದ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News