33ಕೋಟಿ ಜನರು ಬರದ ತೆಕ್ಕೆಯಲ್ಲಿ!: ಕೇಂದ್ರ ಸರಕಾರ
ಹೊಸದಿಲ್ಲಿ, ಎಪ್ರಿಲ್ 20: ದೇಶದ ಮೂರಲ್ಲೊಂದು ರಾಜ್ಯಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.ಕೊನೆಪಕ್ಷ 256 ಜಿಲ್ಲೆಗಳಲ್ಲಿ 33 ಕೋಟಿ ಜನರು ಬರದ ತೆಕ್ಕೆಯಲ್ಲಿದ್ದಾರೆ. 130 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆಯೆಂದು ಅಡಿಷನಲ್ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ತಿಳಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್‌ರ ಅಧೀನದಲ್ಲಿರುವ ಸ್ವರಾಜ್ ಅಭಿಯಾನ್ ನೀಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಕೆ ನಡುವೆ ಕೋರ್ಟ್ ಸರಕಾರದಿಂದ ಸ್ಪಷ್ಟೀಕರಣ ಕೇಳಿತ್ತು.
ಉದ್ಯೋಗ ಖಾತ್ರಿಯೋಜನೆ,ಆಹಾರಸುರಕ್ಷಾಯೋಜನೆ, ಬರ ಪರಿಹಾರ ವ್ಯವಸ್ಥೆ ಮುಂತಾದುವುಗಳ ಮೂಲಕ ಜನರಿಗೆ ನೆರವಾಗಬೇಕೆಂದು ಕೋರ್ಟ್ ಸೂಚಿಸಿದೆ.ಬರಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸಲು ವೈಜ್ಞಾನಿಕ ಮಾರ್ಗಗಳನ್ನು ಅಳವಡಿಸಬೇಕೆಂದು ಕೋರ್ಟ್ ಸಲಹೆ ನೀಡಿದೆ. ಬರದ ಕುರಿತು ವಿವರಗಳನ್ನು ಸಲ್ಲಿಸದ ಗುಜರಾತ್ ಸರಕಾರವನ್ನು ಕೋರ್ಟ್ ತರಾಟೆಗೆತ್ತಿಕೊಂಡಿದೆ. ರಾಜ್ಯ ಗುಜರಾತ್ ಎಂಬ ಕಾರಣದಲ್ಲಿವಿಷಯವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆಎಂದು ವರದಿಗಳು ತಿಳಿಸಿವೆ.