ಇನ್ನು ಗುಣಮಟ್ಟವಿಲ್ಲದ ಉತ್ಪನ್ನಗಳಾದರೆ ಜಾಹೀರಾತು ರೂಪದರ್ಶಿಗಳ ಮೇಲೆಯೂ ಕೇಸು!
ಹೊಸದಿಲ್ಲಿ, ಎಪ್ರಿಲ್ 18: ಗುಣಮಟ್ಟವಿಲ್ಲದ ವಸ್ತುಗಳನ್ನು ಅಪರಿಮಿತವಾಗಿ ಹೊಗಳುವ ಉತ್ಪನ್ನಗಳ ಬ್ರಾಂಡ್ ಅಂಬಾಸಡರ್‌ಗಳನ್ನು ಕಾನೂನಿನ ಮುಂದೆ ತರಲು ಕೇಂದ್ರ ಬಳಕೆದಾರ ಸಂರಕ್ಷಣೆ ಸಮಿತಿ ಸಿದ್ಧತೆನಡೆಸುತ್ತಿದೆ. ಸುಳ್ಳು ಪ್ರಚಾರನಡೆಸುವ ಜಾಹೀರಾತುಗಳನ್ನು ತಡೆಯುವುದಲ್ಲದೆ ಬ್ರಾಂಡ್ ಅಂಬಾಸಡರ್‌ಗಳಿಗೆ ಮಾರ್ಗ ಸೂಚಿ ತರಲಿಕ್ಕೂ ಸಮಿತಿ ಶಿಫಾರಸು ನೀಡಿರುವುದಾಗಿ ಕೇಂದ್ರ ಆಹಾರ ಸಚಿವ ರಾಂವಿಲಾಸ್ ಪಾಸ್ವಾನ್ ತಿಳಿಸಿದ್ದಾರೆಂದು ವರದಿಯಾಗಿದೆ.
ಜಾಹೀರಾತಿನಲ್ಲಿ ಹೇಳಿದ್ದಕ್ಕೆ ತದ್ವಿರುದ್ಧವಾಗಿದ್ದರೆ ಜಾಹೀರಾತಿನ ರೂಪದರ್ಶಿಗಳ ಮೇಲೆಯೂ ವಂಚನೆ ಆರೋಪ ಹೊರಿಸಲಾಗುವುದು. ಜಾಹೀರಾತು ರೂಪದರ್ಶಿಗಳ ಜನಪ್ರಿಯತೆಯ ದುರ್ಬಳಕೆ ಮಾಡಿ ಹಲವಾರು ಕಂಪೆನಿಗಳು ಗುಣಮಟ್ಟ ರಹಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿವೆ. ಈ ಕುರಿತು ಅನೇಕ ದೂರುಗಳನ್ನು ಸ್ವೀಕರಸಿದ್ದರಿಂದ ಕೌನ್ಸಿಲ್ ಇಂತಹ ಶಿಫಾರಸು ಮಾಡಿದೆಯೆನ್ನಲಾಗಿದೆ. ಕಾನೂನು ಜಾರಿಗೊಂಡರೆ ಯಾವುದೇ ಉತ್ಪನ್ನಗಳನ್ನು ಹೊಗಳುವುದು ಮತ್ತು ಜಾಹೀರಾತು ಪ್ರಚಾರದಲ್ಲಿ ಭಾಗವಹಿಸುವ ಮೊದಲು ಉತ್ಪಾದಕರು ಮುಂದಿಡುವ ವಾದ ಸರಿಯಾಗಿದೆಯೇ ಎಂದು ಒರೆಹಚ್ಚಿ ನೋಡಲು ಮತ್ತು ವಿಚಾರಿಸಲು ರೂಪದರ್ಶಿಗಳು ಬಾಧ್ಯಸ್ತರಾಗಲಿದ್ದಾರೆ. ಪೈಪ್ ಮೂಲಕ ಸರಬರಾಜು ಮಾಡುವ ನೀರಿನ ಗುಣಮಟ್ಟವನ್ನೇ ಪರಿಶೀಲಿಸಬೇಕೆಂಬ ನಿಯಮವಿದೆ. ಬಾಟ್ಲಿ ನೀರಿನ ಗುಣಮಟ್ಟದ ಕುರಿತು ಕೆಲವು ಮಾನದಂಡಗಳನ್ನು ಆಹಾರ ಸುರಕ್ಷೆ ಅಥಾರಿಟಿ ಮುಂದಿಟ್ಟಿದೆ.