×
Ad

ಹೈದರಾಬಾದ್‌ನಲ್ಲಿ ನೀರಿಗೆ ತುರ್ತು ಪರಿಸ್ಥಿತಿ, 30ವರ್ಷಗಳಲ್ಲಿ ಇದೇಮೊದಲು:ತೆಲಂಗಾಣ ಸಚಿವ

Update: 2016-04-20 15:55 IST

ತೆಲಂಗಾಣ, ಎಪ್ರಿಲ್ 2ಂ: ಹೈದರಾಬಾದ್‌ನಲ್ಲಿ ನೀರಿನ ತುರ್ತುಪರಿಸ್ಥಿತಿ ನೆಲೆಯಾಗಿದೆ ಎಂದು ತೆಲಂಗಾಣ ಸರಕಾರ ಹೇಳಿದೆ. ರಾಜಧಾನಿ ನಗರಕ್ಕೆ ನೀರು ಸರಬರಾಜು ಮಾಡುವ ನಾಲ್ಕು ಪ್ರಮುಖ ಜಲ ಸಂಗ್ರಾಹಗಾರಗಳು ಬತ್ತಿವೆ ಎಂದು ತೆಲಂಗಾಣ ಮುನ್ಸಿಪಲ್ ಅಡ್ಮಿಸ್ಟ್ರೇಶನ್ ಸಚಿನ ಕೆ.ಟಿ. ರಾಮರಾವ್ ಹೇಳಿದ್ದಾರೆ. 30ವರ್ಷಗಳಲ್ಲಿ ಇದೇ ಮೊದಲು ಹೀಗಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಿಂಗೂರ್, ಮಂಜಿ, ಉಸ್ಮಾನ್ ಸಾಗರ್, ಹಿಮಾಯತ್‌ಸಾಗರ್ ಜಲಸಂಗ್ರಾಹಾಗಾರಗಳಲ್ಲಿ ನೀರು ಬತ್ತಿದ್ದು ಇಲ್ಲಿಂದ ಶೆ.47ರಷ್ಟು ನಗರ ನೀರು ಸರಬರಾಜು ವ್ಯವಸ್ಥೆಯಲ್ಲಿ ಕುಸಿತ ಆಗಿದೆ.

ಹೈದರಾಬಾದ್ ನಗರಕ್ಕೆ ಪ್ರತಿದಿನ 660 ದಶಲಕ್ಷ ಗ್ಯಾಲನ್ ನೀರು ಅಗತ್ಯವಿದೆ. ಆದರೆ 335 ದಶಲಕ್ಷ ನೀರು ಸರಬರಾಜು ಮಾತ್ರ ಸಾಧ್ಯವಾಗುತ್ತಿದೆ. ಸುಮಾರು 200 ಕಿ.ಮೀ. ದೂರವಿರುವ ಗೋದಾವರಿ, ಕೃಷ್ಣ ನದಿಗಳಿಂದ ನೀರು ಸರಬರಾಜು ಮಾಡುವುದಕ್ಕೆ ಉಪಾಯವನ್ನು ಹುಡುಕಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ರಾಜ್ಯವನ್ನು ಬರಮುಕ್ತಗೊಳಿಸಲುರಾಜ್ಯಸರಕಾರ ದೀರ್ಘಕಾಲದ ಯೋಜನೆ ತಯಾರಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಕೇಂದ್ರಸರಕಾರದ ಭಗೀರಥ ಯೋಜನೆ ಅಡಿಯಲ್ಲಿ ಟ್ಯಾಂಕ್‌ಗಳನ್ನು ಶುಚೀಗೊಳಿಸಲಾಗುವುದು. ಹೈದರಬಾದ್‌ಗೆ ನೀರು ತಲುಪಿಸಲು ರಾಜ್ಯಸ ರಕಾರ ಆರು ಕೋಟಿ ರೂಪಾಯಿ ಅನುಮತಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಬಲಶಾಲಿ ಬಿಸಿಗಾಳಿಯಿಂದ ರಾಜ್ಯ ತತ್ತರಿಸಿದೆ.ಹೈದರಾಬಾದ್‌ನ ಮನೆಗಳ ಜಲಸರಬರಾಜು ವ್ಯವಸ್ಥೆ ಕೂಡಾ ತಾರುಮಾರಾಗಿದೆ. ದಿನಬಿಟ್ಟು ದಿನ ಜನರಿಗೆ ಕುಡಿಯುವ ನೀರು ಇತರಿಸಲಾಗುತ್ತಿದೆ. ಮಂಗಳವಾರ 43 ಡಿಗ್ರಿ ಸೆಲ್ಸಿಯಸ್ ಉಷ್ಣಮಾನ ನಗರದಲ್ಲಿತ್ತು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News