×
Ad

ಮುಂಡಗೋಡ : ಕಾಂಗ್ರೆಸ್ ಅಭ್ಯರ್ಥಿ ಲತೀಫ ನಾಲಬಂದ ಜಯ

Update: 2016-04-20 18:28 IST

ಮುಂಡಗೋಡ : ಪಟ್ಟಣಪಂಚಾಯತಿಯ ಎರಡನೇ ವಾರ್ಡಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಲತೀಫ ನಾಲಬಂದ ಭರ್ಜರಿ ಜಯಗಳಿಸಿದ್ದಾರೆ
ಇಂದು ನಡೆದ ಮತ ಏಣಿಕೆಯಲ್ಲಿ 245 ಮತಗಳಿಸಿ ಭರ್ಜರಿ ಜಯಗಳಿಸಿದ್ದಾರೆ. ಇವರ ಸಮೀಪದ ಪಕ್ಷೇತರ ಅಭ್ಯರ್ಥಿ ಇಬ್ರಾಹಿಂ ಶೇಖ ಗಿಂತ 128 ಮತಗಳನ್ನು ಪಡೆದಿದ್ದಾರೆ.

ಇತರೆ ಅಭ್ಯರ್ಥಿಗಳು ಪಡೆದ ಮತಪಡೆದ ವಿವರ ಪಕ್ಷೇತರ ಅಭ್ಯರ್ಥಿ ಇಬ್ರಾಹಿಂ ಶೇಖ 117, ಜೆಡಿಎಸ್ ಅಭ್ಯರ್ಥಿ ಮಹ್ಮದ ಹಸನ ಶೇಖ 70 ಹಾಗು ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಮಹ್ಮದಶಾಹೀದ ಶೇಖ 48 ಮತ ಪಡೆದಿದ್ದಾರೆ.
ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಲತೀಫ ನಾಲಬಂದ ತಮ್ಮ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಜಯದ ಸಿಹಿಹಂಚಿಕೊಳ್ಳಲು ಎರಡನೇ ವಾರ್ಡಿನ ಮತದಾರರ ಮನೆ ಮನೆಗಳಿಗೆ ತಮ್ಮ ಮತದಾರರಿಗೆ ಅಭಿನಂದನೆ ಸಲ್ಲಿಸಿದರು ಕಾಂಗ್ರೆಸ್ ಕಾರ್ಯಕರ್ತರು ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ರವಿವಾರ 17-4-16 ರಂದು ನಡೆದ ಚುನಾವಣೆಯಲ್ಲಿ ಒಟ್ಟು 600 ಮತದಾರರಲ್ಲಿ 480 ಮತಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News