×
Ad

ಬಿಜೆಪಿ ಶಾಸಕನಿಂದ ಹಲ್ಲೆಗೊಳಗಾದ ಪೊಲೀಸ್‌ ಕುದುರೆ ಶಕ್ತಿಮಾನ್‌ ಸಾವು

Update: 2016-04-20 18:39 IST

ಡೆಹ್ರಾಡೂನ್‌, ಎ.20: ಕಳೆದ ಮಾರ್ಚ್‌‌ನಲ್ಲಿ ಡೆರ‍್ರಾಡೋನ್‌ನಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ   ಮಸ್ಸೂರಿಯ ಬಿಜೆಪಿ ಶಾಸಕ ಗಣೇಶ ಜೋಶಿ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮವಾಗಿ ಗಾಯಗೊಂಡಿದ್ದ   ಪೊಲೀಸ್‌ ಕುದುರೆ "ಶಕ್ತಿಮಾನ್‌'  ಇಂದು ಸಾವಿಗೀಡಾಗಿದೆ.
ಮಾರ್ಚ್‌ 14ರಂದು ನಡೆದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಆಯೋಜಿಸಿದ ಪ್ರತಿಭಟನೆ ವೇಳೆ  ಪೊಲೀಸ್‌  ಕುದುರೆಗೆ ಬಿಜೆಪಿ ಶಾಸಕ ಗಣೇಶ ಜೋಶಿ ಕೋಲಿನಿಂದ ಹಿಗ್ಗಾಮುಗ್ಗಾ ಹೊಡೆದಿರುವುದಾಗಿ ಆರೋಪಿಸಲಾಗಿತ್ತು. ಗಾಯಗೊಂಡ ಕುದುರಗೆ ಕಾಲಿಗೆ ಆಗಿದ್ದ ಗಾಯಕ್ಕೆ ಶಸ್ತ್ರಕ್ರಿಯೆ ನಡೆಸಿ ಬಳಿಕ ಬಳಿಕ ಕೃತಕ ಕಾಲು ಅಳವಡಿಸಲಾಗಿತ್ತಾದರೂ ಅದು ಚೇತರಿಸಿಕೊಳ್ಳದೆ ಸಾವಿಗೀಡಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News