×
Ad

ಇಸ್ಲಾಂ ಸ್ವೀಕರಿಸಿದ ಶಿವಸೇನಾ ನಾಯಕ

Update: 2016-04-20 20:05 IST

ಮುಝಫ಼ರ್ ನಗರ್ , ಎ. 20: ಇಲ್ಲಿನ ಶಿವಸೇನಾ ನಾಯಕನೊಬ್ಬ ಇಸ್ಲಾಂ ಧರ್ಮ ಸ್ವೀಕರಸಿದ್ದಾರೆ. ಅಮರ್ ಉಜಾಲದ ವರದಿಯ ಪ್ರಕಾರ ಶಿವಸೇನಾ ನಾಯಕ ಸುಶೀಲ್ ಕುಮಾರ್ ಜೈನ್ ಅವರು ಜೈನ ಸಮುದಾಯದ ಧೋರಣೆ , ಇಲ್ಲಿನ ಮುನಿಸಿಪಲ್ ಕಾರ್ಪೋರೇಶನ್ ಹಾಗು ಕಂದಾಯ ಇಲಾಖೆಯ ಕಾರ್ಯ ವೈಖರಿಯಿಂದ ಬೇಸತ್ತು ಇಸ್ಲಾಂ ಧರ್ಮ ಸ್ವೀಕರಿಸಿದ್ದು ಈಗ ಅವರ ಹೆಸರು ಮೊಹಮ್ಮದ್ ಅಬ್ದುಲ್ ಸಮದ್.

ಕಳೆದ ಫೆಬ್ರವರಿ 15 ರಂದೇ ತಾನು ಇಸ್ಲಾಂ ಧರ್ಮ ಸ್ವೀಕರಿಸಿದ್ದು ಇದರಲ್ಲಿ ಯಾರದೇ ಒತ್ತಡವಿರಲಿಲ್ಲ ಎಂದು ಜೈನ್ ಹೇಳಿದ್ದಾರೆ. ಆದರೆ ಈ ವಿಷಯವನ್ನು ಅವರು ಮಹಾವೀರ ಜಯಂತಿಯ ದಿನವೇ ಬಹಿರಂಗಪಡಿಸಿದ್ದಾರೆ. ಇದು ಮುಝಫ಼ರ್ ನಗರದ ಖಾತೌಲಿ ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News