ಕಾಪು ಪುರಸಭೆ ಚುನಾವಣೆ: ಎಸ್.ಡಿ.ಪಿ.ಐ ಮತಯಾಚನೆ
ಕಾಪು, ಎ.20: ಕಾಪು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಸ್‌ಡಿಪಿಐ ಅಭ್ಯರ್ಥಿಗಳ ಪರ ಪಕ್ಷದ ಮುಖಂಡರು ಇಂದು ಮತಯಾಚನೆ ನಡೆಸಿದರು.
ಎಸ್‌ಡಿಪಿಐ ಮುಖಂಡ ಅಬೂಬಕರ್ ಮಾತನಾಡಿ, ಹಸಿವು ಮುಕ್ತ ಹಾಗೂ ಭಯಮುಕ್ತ ದೇಶವನ್ನು ಕಟ್ಟುವ ಉದ್ದೇಶ ಹೊಂದಿರುವ ಎಸ್‌ಡಿಪಿಐ ಪಕ್ಷವು ಭಾರತದ ಜನತೆಯ ಆಶೋತ್ತರವಾಗಿದೆ ಮತ್ತು ಹೊಸ ರಾಜಕೀಯ ದೃಷ್ಟಿಕೋನದ ಪ್ರತಿನಿಧಿಯಾಗಿದೆ. ಜನರನ್ನು ರಾಜಕೀಯವಾಗಿ ಸಬಲೀಕರಿಸುವ ಎಲ್ಲರಿಗೂ ಸಮಾನ ಹಕ್ಕುಗಳಿರುವ ಭಾರತದ ನಿರ್ಮಾಣದ ಗುರಿಯನ್ನು ಹೊಂದಿದೆ ಎಂದರು.
ಶತಮಾನಗಳಿಂದ ಇತರ ರಾಜಕೀಯ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ಕಾಪು ಜನತೆ ಇದಕ್ಕೆ ಪರ್ಯಾಯವಾಗಿ ಹೊಸ ಪಕ್ಷದ ನಿರೀಕ್ಷೆಯಲ್ಲಿರುವುದು ಎಸ್‌ಡಿಪಿಐಯ ಹೋರಾಟಕ್ಕೆ ಶಕ್ತಿ ತುಂಬಿದೆ. ಕಾಪು ಪುರಸಭೆ ವ್ಯಾಪ್ತಿಯ ಪ್ರದೇಶಗಳಲ್ಲಿ ನಿಷ್ಪಕ್ಷ ಹಾಗೂ ನಿಸ್ವಾರ್ಥವಾಗಿ ಜನತೆಯ ಸೇವೆ ಮಾಡಲು ಮತವನ್ನು ನೀಡಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭ ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರಾದ ಆಸೀಫ್ ಕೋಟೇಶ್ವರ, ನಝೀರ್ ಚಿಯರ್ಸ್ ಉಡುಪಿ, ಸಾದಿಕ್ ಉಡುಪಿ, ಸಮದ್ ಮಲ್ಪೆ, ಫಯಾಝ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.