ಮನಪಾ ವಿರುದ್ಧ ಫೋರಮ್ ಫಾರ್ ಜಸ್ಟೀಸ್ ಧರಣಿ

Update: 2016-04-20 18:27 GMT

ಮಂಗಳೂರು, ಎ.20: ಮಂಗಳೂರು ಮಹಾನಗರ ಪಾಲಿಕೆಯು ದುಬಾರಿ ಕಸ ತೆರಿ ಗೆಯನ್ನು ವಿಧಿಸಿ ಜನಸಾಮಾನ್ಯರನ್ನು ಹಗಲು ದರೋಡೆ ಮಾಡುತ್ತಿದ್ದು, ಮೂಲಭೂತ ಸೌಕ ರ್ಯಗಳನ್ನು ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಫೋರಮ್ ಫಾರ್ ಜಸ್ಟೀಸ್ ಸಂಘಟನೆಯ ವತಿಯಿಂದ ಮನಪಾ ಕಚೇರಿ ಮುಂದೆ ಧರಣಿ ನಡೆಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡರು, ಅಸಮರ್ಪಕ ಕಸ ವಿಲೇವಾರಿ, ಮಲೇರಿಯಾ ಬಾಧೆ, ಕಾಣೆಯಾಗಿರುವ ಫುಟ್‌ಪಾತ್, ಚರಂಡಿ, ಮರಳಿನ ಅಭಾವ, ಖಾಸಗಿ ವ್ಯಾಪಾರ ಮಳಿಗೆ ಗಳಿಂದ ಫುಟ್‌ಪಾತ್‌ಗಳ ಅತಿಕ್ರಮಣ, ಪಾರ್ಕಿಂಗ್ ಸೌಲಭ್ಯಹಾಗೂ ಸಾರ್ವಜನಿಕ ಶೌಚಾಲಯದ ಕೊರತೆ ಇತ್ಯಾದಿ ಸಮಸ್ಯೆ ಗಳನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿದರು. ಜೊತೆಗೆ ಕಸದ ಮೇಲೆ ವಿಧಿಸಿರುವ ತೆರಿಗೆಯನ್ನು 2/3ರಷ್ಟು ಕಡಿತಗೊಳಿಸಲು ಆಗ್ರಹಿಸಿದರು. ಜೊತೆಗೆ ನಗರದ ಜನತೆ ತಮ್ಮ ನಾಗರಿಕ ಹಕ್ಕುಗಳನ್ನು ಪಡೆಯಲು ಪ್ರತಿಯೊಂದು ವಾರ್ಡ್‌ಗಳಲ್ಲಿ ಜನರು ಸಮಿತಿಯನ್ನು ರಚಿಸಬೇಕೆಂದು ಕರೆ ನೀಡಿದರು. ಭಾರತ್ ಸ್ಕೌಟ್ಸ್ ದಳದ ಮುಖ್ಯ ಆಯುಕ್ತ ಎನ್.ಜಿ. ಮೋಹನ್ ಧರಣಿಯನ್ನು ಉದ್ಘಾ ಟಿಸಿದರು. ಫೋರಮ್ ಫಾರ್ ಜಸ್ಟೀಸ್‌ನ ಕಾರ್ಯಾಧ್ಯಕ್ಷ ದಯಾನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಸಂತೋಷ್ ಕುಮಾರ್ ಕದ್ರಿ ಸ್ವಾಗತಿಸಿದರು. ಧರಣಿಯಲ್ಲಿ ಚಂದ್ರಕಲಾನಂದಾವರ, ಅಲೆಕ್ಸಾಂಡರ್ ಡಿಸೋಜಾ, ವಾಸುದೇವ ಉಚ್ಚಿಲ್,ಕಾರ್ಪೊರೇಟರ್ ದಯಾನಂದ ಶೆಟ್ಟಿ, ಎಚ್.ಗಂಗಾಧರ, ಡಾ. ಸತೀಶ್ ರಾವ್, ಚಿತ್ತರಂಜನ್ ಶೆಟ್ಟಿ, ಸುರತ್ಕಲ್, ವಾಸುದೇವ ಬೋಳೂರು,ಪದ್ಮನಾಭ ಉಳ್ಳಾಲ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News