×
Ad

ಬಡಗುಪೇಟೆ ದೇವಳದ ವಿವಾದಿತ ಜಾಗಕ್ಕೆ ಬೇಲಿ

Update: 2016-04-20 23:59 IST

ಉಡುಪಿ, ಎ.20: ಹೈಕೋರ್ಟ್ ಆದೇಶದಂತೆ ಉಡುಪಿಯ ಸಹಕಾರಿ ಇಲಾಖಾಧಿಕಾರಿಗಳು ಸರ್ವೇ ನಡೆಸಿ ಮೂಲ ಹಕ್ಕುದಾರರ ಸ್ವಾಧೀನಕ್ಕೆ ಒಪ್ಪಿಸಿದ ಉಡುಪಿ ಬಡಗುಪೇಟೆಯ ಶ್ರೀವಾಸುಕೀ ಅನಂತ ಪದ್ಮನಾಭ ದೇವಳದ ವಿವಾದಿತ ಐದು ಸೆಂಟ್ಸ್ ಜಾಗಕ್ಕೆ ಬುಧವಾರ ಬೇಲಿ ಹಾಕುವ ಕಾರ್ಯ ನಡೆಯಿತು.

ಜಾಗದ ಮೂಲ ಹಕ್ಕುದಾರ ರಾದ ರಮಣ್ ಭಟ್ ಕೂಲಿಯಾಳುಗ ಳೊಂದಿಗೆ ಆಗಮಿಸಿ ಹೈಕೋರ್ಟ್ ಆದೇಶದಂತೆ ತಮ್ಮ ವಶವಾಗಿರುವ ಜಾಗದಲ್ಲಿದ್ದ ಗೇಟುಗಳನ್ನು ತೆರವು ಗೊಳಿಸಿ ಮುಖ ಮಂಟಪದ ಒಳಗೆ ಹೊಂಡ ತೆಗೆದು ಐದು ಸೆಂಟ್ಸ್ ಜಾಗದ ಸುತ್ತ ಕಲ್ಲು ಕಂಬಗಳನ್ನು ನೆಟ್ಟು ಬೇಲಿ ಹಾಕಿದರು. ಈ ವೇಳೆ ದೇವಸ್ಥಾನದವರಿಗೂ ರಮಣ್ ಭಟ್ ಅವರಿಗೂ ಮಾತಿನ ಚಕಮಕಿ ನಡೆಯಿತು.

ಇದೀಗ ಶೇ.90ರಷ್ಟು ಜಯ ನನಗೆ ಸಿಕ್ಕಿದೆ. ಇನ್ನು ಶೇ.10ರಷ್ಟು ನ್ಯಾಯ ಸಿಗಬೇಕಾಗಿದೆ. ಈ ವಿಚಾ ರದಲ್ಲಿ ಕಾನೂನು ಹೋರಾಟ ಮುಂದು ವರಿಯಲಿದೆ. ಯಾವುದೇ ಕಾರಣಕ್ಕೂ ಜಾಗ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಇದೆಲ್ಲ ಇವರು ನನ್ನ ಅಮ್ಮನಿಗೆ ಮಾಡಿದ ಅನ್ಯಾಯದ ವಿರುದ್ಧ ಹೋರಾಟವಾಗಿದೆ ಎಂದು ರಮಣ್ ಭಟ್ ತಿಳಿಸಿದರು.

ಸಹಕಾರಿ ಇಲಾಖೆಯ ಅಧಿಕಾರಿಗಳು ಹೈಕೋರ್ಟ್ ಆದೇಶ ನೀಡಿದರೂ ಕಟ್ಟಡ ತೆರವುಗೊಳಿಸದೆ ಕೇವಲ ಗಡಿ ಗುರುತು ಹಾಕಿ ಕೊಟ್ಟಿದ್ದಾರೆ. ಇದೀಗ ನನ್ನ ಪಾಲಾಗಿರುವ ಜಾಗಕ್ಕೆ ಬೇಲಿ ಹಾಕಿ ದ್ದೇನೆ ಎಂದು ಅವರು ಹೇಳಿದರು.

 ಶಿವಳ್ಳಿ ಗ್ರಾಮದ ಬಡಗು ಪೇಟೆಯಲ್ಲಿರುವ ಐದು ಸೆಂಟ್ಸ್ ಜಾಗ ವನ್ನು ವಾರಿಜಾಕ್ಷಿ ಭಟ್ ಉಡುಪಿಯ ಮಹಾಲಕ್ಷ್ಮೀ ಕೋಆಪರೇಟಿವ್ ಸೊಸೈಟಿ ಯಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದರು. ಸರಿಯಾಗಿ ಸಾಲ ಪಾವತಿಯಾಗದ ಹಿನ್ನೆಲೆಯಲ್ಲಿ ಸೊಸೈಟಿಯವರು ಜಾಗವನ್ನು ಏಲಂನಲ್ಲಿಟ್ಟಿದ್ದರು. ಈ ಜಾಗವನ್ನು ನೆರೆಮನೆಯ ವಾಸುಕೀ ದೇವಳದ ಶ್ರೀಕಾಂತ್ ಸಾಮಗ ಖರೀದಿಸಿದ್ದರು. ಏಲಂ ವಿರೋಧಿಸಿ, ಜಾಗವನ್ನು ಮರಳಿ ಕೊಡಿಸುವಂತೆ ಕೋರಿ ವಾರಿಜಾಕ್ಷಿ ಭಟ್ ಪರ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಯಿತು. ಹೈಕೋರ್ಟ್ ವಾರಿ ಜಾಕ್ಷಿ ಪರ ಆದೇಶ ನೀಡಿತು. ಸುಮಾರು 23 ವರ್ಷಗಳ ಹೋರಾಟದ ನಂತರ 2016 ಮಾ.21ರಂದು ಸಹಕಾರಿ ಇಲಾಖೆಯ ಅಧಿಕಾರಿಗಳು ಸರ್ವೇ ನಡೆಸಿ ಗಡಿ ಗುರುತಿಸಿ ಐದು ಸೆಂಟ್ಸ್ ಜಾಗವನ್ನು ವಾರಿಜಾಕ್ಷಿ ಭಟ್‌ರ ಮಗ ರಮಣ್ ಭಟ್ ಅವರ ಸಾಧ್ವೀನಕ್ಕೆ ಒಪ್ಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News