ಪುತ್ತೂರು: ಮನೆಯಿಂದ ಕಳ್ಳತನ

Update: 2016-04-20 18:40 GMT

ುತ್ತೂರು, ಎ.20: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಳನುಗ್ಗಿದ ಕಳ್ಳರು 1 ಲಕ್ಷ ರೂ. ಕಳವು ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ. ಪುತ್ತೂರು ನಗರದ ಹೊರವಲಯದ ಪಡೀಲ್ ಬನ್ನೂರು ಜೋಡುಕಟ್ಟೆ ಎಂಬಲ್ಲಿನ ಮುಹಮ್ಮದ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮಂಗಳವಾರ ಮನೆ ಮಂದಿ ಕಡಬದಲ್ಲಿನ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದರು. ಬುಧವಾರ ಅಪರಾಹ್ನ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿರುವ ಕಳ್ಳರು ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ನಗದನ್ನು ಕಳವು ನಡೆಸಿರುವುದು ಬೆಳಕಿಗೆ ಬಂದಿದೆ.

 ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News