×
Ad

ಮುಂಬೈನ ಕ್ಲಬ್-ಜಿಮ್ಖಾನಾಗಳಲ್ಲಿ ಈಗಲೂ ಕುಡಿಯುವ ನೀರು ಬಳಕೆ!

Update: 2016-04-21 10:59 IST

 ಮುಂಬೈ, ಎ.21:ಮಹಾರಾಷ್ಟ್ರದಲ್ಲಿ ತೀವ್ರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ರಾಜ್ಯದ ಮೂರು ಸ್ಟೇಡಿಯಂಗಳಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಪಂದ್ಯಗಳನ್ನು ಬಾಂಬೆ ಹೈಕೋರ್ಟ್‌ನ ಆದೇಶದ ಮೇರೆಗೆ ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ.

ಆದರೆ, ಮುಂಬೈ ಮಹಾನಗರದಲ್ಲಿರುವ 200ಕ್ಕೂ ಅಧಿಕ ಕ್ಲಬ್‌ಗಳು ಹಾಗೂ ಜಿಮ್ಖಾನಾಗಳಲ್ಲಿ ಈಗಲೂ ಪ್ರತಿನಿತ್ಯ ಎರಡರಿಂದ 4 ಮಿಲಿಯನ್ ಲೀಟರ್ ಕುಡಿಯುವ ನೀರನ್ನು ಮೈದಾನದ ಪಿಚ್ ನಿರ್ವಹಣೆಗೆ ಬಳಸಲಾಗುತ್ತಿದೆ.

ಐಪಿಎಲ್‌ನ ವೇಳೆ ಪಿಚ್‌ಗಳ ನಿರ್ವಹಣೆಗೆ ನೀರನ್ನು ಪೋಲು ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ವಿವಾದ ತಲೆ ಎತ್ತಿದೆ. ಆದರೆ, ನಗರದ ಕ್ಲಬ್‌ಗಳು ಹಾಗೂ ಜಿಮ್ಖಾನಾಗಳಿಗೆ ಈಗಲೂ ಯಥೇಚ್ಛ ನೀರು ಸರಬರಾಜಾಗುತ್ತಿರುವ ಬಗ್ಗೆ ಪ್ರಶ್ನೆ ಎದುರಾಗಿದೆ.

ನಗರದ ನಿವಾಸಿಗಳು ನೀರಿನ ಕೊರತೆಯ ಬಗ್ಗೆ ಮಹಾನಗರ ಪಾಲಿಕೆಗೆ ದೂರು ನೀಡಿದ್ದಾರೆ. ಕ್ಲಬ್‌ಗಳು 100 ಲೀ.ಗೆ 5 ರೂ. ಶುಲ್ಕ ಪಾವತಿಸುತ್ತಿವೆ. ವಾಣಿಜ್ಯ ಬಳಕೆಗೆ ಪೌರ ಮಂಡಳಿಯು ಪ್ರತಿ ಸಾವಿರ ಲೀ. ನೀರಿಗೆ 46.65 ರೂ. ಶುಲ್ಕ, ಗೃಹ ಬಳಕೆಗೆ ಸಾವಿರ ಲೀ.ಗೆ 4.67 ರೂ. ಶುಲ್ಕ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News