ನೇಮರ್ ಕೋಪಾ ಅಮೆರಿಕ ಟೂರ್ನಿಗೆ ಅಲಭ್ಯ, ಒಲಿಂಪಿಕ್ಸ್‌ಗೆ ಲಭ್ಯ
ಬಾರ್ಸಿಲೋನ, ಎ.21: ಬಾರ್ಸಿಲೋನ ಕ್ಲಬ್‌ನ್ನು ಪ್ರತಿನಿಧಿಸುತ್ತಿರುವ ಬ್ರೆಝಿಲ್‌ನ ಸ್ಟಾರ್ ಆಟಗಾರ ನೇಮರ್ ಜೂನ್‌ನಲ್ಲಿ ಅಮೆರಿಕದಲ್ಲಿ ನಡೆಯಲಿರುವ ಕೋಪಾ ಅಮೆರಿಕ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ, ಆಗಸ್ಟ್‌ನಲ್ಲಿ ನಡೆಯುವ ರಿಯೋ ಒಲಿಂಪಿಕ್ಸ್‌ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಆಗಸ್ಟ್ 3 ರಿಂದ 21ರ ತನಕ ಬ್ರೆಝಿಲ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಮಾತ್ರ ನೇಮರ್ ಆಡಲಿದ್ದಾರೆ ಎಂಬ ನಮ್ಮ ಪ್ರಸ್ತಾವಕ್ಕೆ ಸಮ್ಮತಿ ನೀಡಿರುವ ಬ್ರೆಝಿಲ್ ಫುಟ್ಬಾಲ್ ಫೆಡರೇಶನ್ ಹಾಗೂ ಅದರ ಅಧ್ಯಕ್ಷ ಮಾರ್ಕೊ ಪೊಲೊ ಡೆಲ್ ನೆರೊ ಅವರಿಗೆ ಕೃತಜ್ಞತೆ ಸಲ್ಲಿಸುವೆವು. ಜೂ.3 ರಿಂದ 26ರ ತನಕ ಅಮೆರಿಕದಲ್ಲಿ ನಡೆಯಲಿರುವ ಕೋಪಾ ಅಮೆರಿಕ ಟೂರ್ನಿಯಲ್ಲಿ ಆಡುವುದರಿಂದ ಮುಕ್ತಗೊಳಿಸಲಾಗಿದೆ ಎಂದು ಬಾರ್ಸಿಲೋನ ಕ್ಲಬ್ ಹೇಳಿದೆ.
24ರ ಹರೆಯದ ನೇಮರ್ ಬ್ರೆಝಿಲ್ ಒಲಿಂಪಿಕ್ಸ್ ತಂಡದಲ್ಲಿ ಸ್ಥಾನ ಪಡೆದಿರುವ ಮೂವರು ಯುವ ಆಟಗಾರರ ಪೈಕಿ ಓರ್ವರಾಗಿದ್ದಾರೆ. ಬ್ರೆಝಿಲ್ ಈ ತನಕ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದೆ. ನಾಲ್ಕು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಬ್ರೆಝಿಲ್ ಫೈನಲ್ ತಲುಪಿದ್ದರೂ ಮೆಕ್ಸಿಕೊ ವಿರುದ್ಧ ಸೋತಿತ್ತು. ಆಗ ತಂಡದಲ್ಲಿ ನೇಮರ್ ಕೂಡ ಇದ್ದರು.