ವಿದ್ಯಾರ್ಥಿನಿಯೊಂದಿಗೆ ಪ್ರೀತಿ,ಶಿಕ್ಷಕನನ್ನು ಥಳಿಸಿ ಥಳಿಸಿ ಹತ್ಯೆ!
ಲಕ್ನೊ, ಎಪ್ರಿಲ್ 21: ಉತ್ತರಪ್ರದೇಶದ ರಾಜಧಾನಿಯಲ್ಲಿ ಗುರುಶಿಷ್ಯೆ ಪೇಮ ಪ್ರಸಂಗದಿಂದ ಕೋಪೊದ್ರಿಕ್ತರಾದ ವಿದ್ಯಾರ್ಥಿನಿಯ ಮನೆಯವರು ಶಿಕ್ಷಕನನ್ನು ಥಳಿಸಿ ಕೊಂದು ಹಾಕಿದ ಘಟನೆ ವರದಿಯಾಗಿದೆ. ಮಾಲ್ ಠಾಣೆ ವ್ಯಾಪ್ತಿಯ ಮಲಕಾಪುರ ಗ್ರಾಮದ ನಿವಾಸಿ ರಾಮ್‌ಕುಮಾರ್(32) ಖಾಸಗಿ ಶಾಲೆಯ ಶಿಕ್ಷಕನಾಗಿದ್ದಾನೆ. ಈ ಶಿಕ್ಷಕನಿಗೆ ವಿದ್ಯಾರ್ಥಿನಿಯೊಬ್ಬಳೊಂದಿಗೆ ಪ್ರೇಮ ಆಂಕುರಿಸಿತ್ತು ಎನ್ನಲಾಗಿದೆ. ಆದ್ದರಿಂದ ಶಿಕ್ಷಕ ವಿದ್ಯಾರ್ಥಿನಿ ಕಳೆದ ಸೋಮವಾರ ದೂರ ಓಡಿ ಹೋಗಿ ಎಲ್ಲಿಯಾದರೂ ಬದುಕುವುದೆಂದು ನಿರ್ಧರಿಸಿ ಹೊರಟಿದ್ದರು.
ಮನೆಯವರು ಹುಡುಗಿಯನ್ನು ಹುಡುಕಾಡತೊಡಗಿದರು. ಶಿಕ್ಷಕನೂ ನಾಪತ್ತೆಯಾಗಿರುವುದು ತಿಳಿಯಿತು. ವಿದ್ಯಾರ್ಥಿನಿಯ ಮನೆಯವರು ಈ ಶಿಕ್ಷಕನನ್ನು ಹುಡುಕ ತೊಡಗಿದರು. ವಲಿಹಾಬಾದ್ ಠಾಣೆ ವ್ಯಾಪ್ತಿಯ ರಹ್ಮಾನ್‌ಖೇಡದ ಜೌರಿಯ ಗ್ರಾಮದಲ್ಲಿ ಶಿಕ್ಷಕ ರಾಮಕುಮಾರ್ ಪತ್ತೆಯಾದಾಗ ಹುಡುಗಿಯ ಮನೆಯವರು ಪ್ಲಾಸ್ಟಿಕ್ ಪೈಪ್‌ನಿಂದ ಹೊಡೆದು ಹೊಡೆದು ಕೊಂದುಹಾಕಿದರು. ಶಿಕ್ಷಕನ ಕಾರುಭಾರಿನಿಂದಾಗಿ ಗ್ರಾಮನಿವಾಸಿಗಳು ಕೂಡಾ ಅವನ ನೆರವಿಗೆ ಧಾವಿಸಲಿಲ್ಲ. ಪೊಲೀಸರಿಗೆ ಸುದ್ದಿತಿಳಿದು ಅವರು ಬಂದಾಗ ರಾಮಕುಮಾರ್ ಹತ್ಯೆಯಾಗಿದ್ದ. ಪೊಲೀಸರು ಶವವನ್ನು ಪೋಸ್ಟ್ ಮಾರ್ಟಂ ಕಳುಹಿಸಿದ್ದಾರೆಂದು ವರದಿಗಳು ತಿಳಿಸಿವೆ.
ಗ್ರಾಮನಿವಾಸಿಗಳು ತಿಳಿಸಿದಂತೆ ಶಿಕ್ಷಕ ಚೀತ್ಕರಿಸಿ ಪ್ರಾಣ ಉಳಿಸಿ ಎಂದು ಬೇಡುತ್ತಿದ್ದ.ಆದರೆ ಹುಡುಗಿಯ ಮನೆಯವರ ಮನಸು ಕರಗಲೇ ಇಲ್ಲ. ಹುಡುಗಿಯನ್ನುಅಪಹರಿಸಿದ ಆರೋಪವಿದ್ದುದರಿಂದ ಗ್ರಾಮದ ಜನರು ಕೂಡಾ ಅವನನ್ನು ಉಳಿಸಲು ಹೋಗಲಿಲ್ಲ. ಆದ್ದರಿಂದ ಅವರು ಹೊಡೆದುಹೊಡೆದು ಕೊಂದು ಹಾಕಿದರು. ಈ ಕುರಿತು ಮಲಿಹಾಬಾದ್ ಠಾಣಾಧಿಕಾರಿ ಉಮಾಶಂಕರ್ ಉತ್ತಮ್ ಮೃತನ ಮನೆಯವರ ದೂರಿನಂತೆ ಹುಡುಗಿಯ ತಂದೆ ರಾಜರಾಮ್ ಮತ್ತು ಅಣ್ಣ ಅನಿಲ್ ಮತ್ತು ಮನಿಷ್‌ರ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.