×
Ad

ಪಾನಮತ್ತರಾಗಿ ಕಾರು ಗುಂಪಿನೆಡೆಗೆ ಚಲಾಯಿಸಿ ಎಂಟು ಮಂದಿ ಸಾವು 32 ಮಂದಿಗೆ ಗಾಯ!

Update: 2016-04-21 17:11 IST

ದೇವರಿಯ, ಎಪ್ರಿಲ್ 21: ಪಾನಮತ್ತರಾಗಿ ಕಾರುಚಲಾಯಿಸಿ ಜನರ ಗುಂಪಿನ ಮೇಲೆ ಹರಿಸಿದ್ದರ ಪರಿಣಾಮ ಎಂಟು ಮಂದಿ ಮೃತರಾಗಿ 31 ಮಂದಿ ಗಾಯಗೊಂಡ ಘಟನೆ ಇಲ್ಲಿಂದ ವರದಿಯಾಗಿದೆ. ಧಾರ್ಮಿಕ ಕಾರ್ಯಕ್ರಮವೊಂದನ್ನು ವೀಕ್ಷಿಸುತ್ತಿದ್ದ ಜನರ ಗುಂಪಿನ ಮೇಲೆ ಕಾರು ಹರಿದಿತ್ತು. ಜಿಲ್ಲಾಡಳಿತ ಮೃತ ವ್ಯಕ್ತಿಗಳ ಕುಟುಂಬಕ್ಕೆ ತಲಾ1 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ಐವತ್ತು ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದೆ.

ಗೌರಿಬಜಾರ್ ಠಾಣಾ ವ್ಯಾಪ್ತಿಯ ಪನನಹಾ ಗ್ರಾಮದಲ್ಲಿ ಸೋಮವಾರ ರಾತ್ರೆ ರಾಮ್‌ದಾಸ್ ಎಂಬವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಅಲ್ಲಿ ಸಾಂಸ್ಕೃತಿಕ ನೃತ್ಯವನ್ನೂ ಆಯೋಜಿಸಲಾಗಿತ್ತು. ಸುಮಾರು ಹನ್ನೊಂದು ಗಂಟೆ ವೇಳೆಗೆ ವೀಕ್ಷಕರ ಗುಂಪಿನೆಡೆಗೆ ವೇಗವಾಗಿ ಬಂದ ಕಾರೊಂದು ನುಗ್ಗಿತ್ತು. ರುದ್ರಪುರ ಎಂಬಲ್ಲಿಂದ ಬಂದಿದ್ದ ಕಾರಿನಲ್ಲಿದ್ದ ಐವರು ಪಾನಮತ್ತರಾಗಿದ್ದರು. ಗುಂಪಿಗೆ ಢಿಕ್ಕಿಹೊಡೆದ ಕಾರು ಸ್ಥಳದಲ್ಲಿಯೇ ಏಳು ಮಂದಿ ಸಾಯಲು ಕಾರಣವಾಗಿ ಹಲವಾರು ಮಂದಿಯನ್ನು ಗಾಯಗೊಳಿಸಿ ದೂರಕ್ಕೆ ಹೋಗಿ ಮಗುಚಿ ಬಿದ್ದಿತ್ತು. ಕಾರಿನಲ್ಲಿದ್ದ ಐವರೂ ಪಾನಮತ್ತರಾಗಿದ್ದರು. ಪೊಲೀಸರು ಬಂದು ಪರಿಶೀಲಿಸಿದಾಗ ಕಾರಿನೊಳಗೆ ಮದ್ಯದ ಬಾಟ್ಲಿಗಳ ರಾಶಿಯೇ ದೊರಕಿತ್ತು. ಕಾರಿನಲ್ಲಿದ್ದವರಲ್ಲಿ ಇಬ್ಬರನ್ನು ಸ್ಥಳೀಯರೆ ಹಿಡಿದಿದ್ದರೆ ಮೂವರು ಓಡಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಮಂದಿ ಸ್ಥಳದಲ್ಲಿಯೇ ಸತ್ತಿದ್ದರೆ ಒಬ್ಬ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾನೆ. ಕಾರಿನಲ್ಲಿದ್ದವರು ರುದ್ರಪುರದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳುತ್ತಿದ್ದವರು ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News