ಪಟ್ಟೋರಿತ್ತಾಯ, ಪಿಲಿಚಾಮುಂಡಿ, ಪರಿವಾರ ದೈವಗಳ ದೈವಸ್ಥಾನ ಪಟ್ಟೋರಿಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ
ಕೊಣಾಜೆ: ಕೊಣಾಜೆ ಗ್ರಾಮದ ಪಟ್ಟೋರಿಯ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನೂತನ ಗರ್ಭಗುಡಿ, ಗೋಪುರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ವಿಧಿ ವಿಧಾನದೊಂದಿಗೆ ಗುರುವಾರ ನಡೆಯಿತು.
ಬುಧವಾರದಂದು ಸಂಜೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ, ಸಪ್ತಶುದ್ದಿ, ಪ್ರಸಾದಶುದ್ಧಿವಾಸ್ತು ಹೋಮ, ವಾಸ್ತು ಬಲಿ, ವಾಸ್ತುಪೂಜೆ, ಪ್ರಕಾರ ಬಲಿ, ದೈವಗಳ ಮಂಚ ಅಧಿವಾಸ, ಕಲಶಾಧಿವಾಸ, ಆಧಿವಾಸ ಹೋಮ ನಡೆದು, ಗುರುವಾರದಂದು ಬೆಳಿಗ್ಗೆ ಗಣಪತಿ ಹೋಮ, ಬಳಿಕ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವಿಜ್ರಂಭಣೆಯಿಂದ ನಡೆಯಿತು, ಬಳಿಕ ತಂಬಿಲ, ಮಹಾಪೂಜೆ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ಮಲರಾಯ ಬಂಟ ದೈವಗಳ ನೇಮ, ರಾತ್ರಿ ಪಟ್ಟೋರಿತ್ತಾಯ ದೈವದ ಕೋಟ್ಯದಾಯನ ನೇಮ ನಡೆದು ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಗೌರವಾಧ್ಯಕ್ಷರು ಹಾಗೂ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಊರ ನಾಗರಿಕರು ಭಾಗವಹಿಸಿದ್ದರು. ಎ.22ರಂದು ಶುಕ್ರವಾರ ರಾತ್ರಿ ಪಟ್ಟೋರಿತ್ತಾಯ ದೈವದ ವಲಸರಿ, ಜುಮಾದಿ ಬಂಟ ದೈವದ ನೇಮ ಹಾಗೂ ಎ.24ರಂದು ಶನಿವಾರ ಪಿಲಿಚಾಮುಂಡಿ ದೈವದ ನೇಮ ಹಾಗೂ ಅಣ್ಣಪ್ಪ ಪಂಜುರ್ಲಿ ದೈವದ ನೇಮವು ನಡೆಯಲಿದೆ.