×
Ad

ಭಟ್ಕಳ: ಪುರಸಭೆ ಉಪಚುನಾವಣೆ; ಅಶ್ಫಾಖ್ ಕೆ.ಎಂ. ಆಯ್ಕೆ

Update: 2016-04-21 18:43 IST

ಭಟ್ಕಳ : ಬುಧವಾರ ನಡೆದ ಭಟ್ಕಳ ಪುರಸಭೆಯ 13ನೇ ವಾರ್ಡ್‌ನ ಉಪ ಚುನಾ  

ವಣೆಯಲ್ಲಿ ಅಷ್ಫಾಖ್ ಕೆ.ಎಂ. 217 ಮತಗಳನ್ನು ಪಡೆಯುವುದರ ಮೂಲಕ ಜಯವನ್ನು ದಾಖಲಿಸಿದ್ದಾರೆ. ನಿಕಟ ಪ್ರತಿಸ್ಪರ್ಧಿ ಮಖ್ಬೂಲ್ ಜುಬಾಪುರವರಿಗೆ 165 ಮತಗಳು ದೊರಕಿವೆ. 

 ಪುರಸಭೆಯ ಚುನಾವಣೆಯಲ್ಲಿ ತಂಝೀಮ್ ಸಂಸ್ಥೆಯು ನಿರ್ಣಯಕ ಪಾತ್ರವಹಿಸುತ್ತಿದ್ದು ಬುಧವಾರ ನಡೆದ ಉಪಚುನಾವಣೆಯಲ್ಲೂ ಅಶ್ಪಾಖ್‌ರ ಗೆಲುವಿನ ಹಿಂದು ತಂಝೀಮ್ ನ ಅಭಯ ಹಸ್ತ ಇದೆ. ದೀರ್ಘಕಾಲ ಗೈರು ಹಾಜರಿದ್ದ ಕಾರಣಕ್ಕಾಗಿ 13 ಮತ್ತು 17ರ ಕೌಂಸಿಲರುಗಳಾಗಿದ್ದ ಡಿ ಎಚ್ ಶಬ್ಬಾರ್ ಮತ್ತು ಪರ್ವೇಜ್ ಕಾಶಿಂಜೀಯವರ ನೇಮಕಾತಿಯನ್ನು ಜಿಲ್ಲಾ ಉಪಕಮೀಶನರ್ ಉಜ್ವಲ ಕುಮಾರ್ ಘೋಷ್ ರವರು ರದ್ದುಪಡಿಸಿದ್ದರು. ಕಳೆದ ಆರು ತಿಂಗಳಿಂದ ಈ ಎರಡೂ ಸ್ಥಾನಗಳು ಖಾಲಿ ಇದ್ದವು.

ವಾರ್ಡ್ ನಂ 17ರಲ್ಲಿ ಎಸ್. ಎಂ ಪರ್ವೇಜ್ ರವರು ಇದಕ್ಕೂ ಮುನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಮಜ್ಲಿಸ್ ಎ ಇಸ್ಲಾಹ್ ವ ತಂಜೀಮ್ ಸಂಘಟನೆ ಬೆಂಬಲ ಸೂಚಿಸಿದೆ.

ಭಟ್ಕಳ ಪುರಸಭೆಯಲ್ಲಿ ಒಟ್ಟು 23 ವಾರ್ಡುಗಳಿದ್ದು ಇದರಲ್ಲಿ 16 ವಾರ್ಡುಗಳಲ್ಲಿ ತಂಝೀಮ್ ಬೆಂಬಲಿತ ಸದಸ್ಯರೇ ಆಯ್ಕೆ ಯಾಗಿರುವುದು ವಿಶೇಷವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News