×
Ad

‘ಬಾಂಬ್’ ಎಂದು ಹೇಳಿದ ಪ್ರಯಾಣಿಕ: ವಿಮಾನದ ಸಂಪೂರ್ಣ ಶೋಧ; ಹಾರಾಟ ವಿಳಂಬ

Update: 2016-04-21 19:41 IST

ಆ್ಯಲ್ಬಾನಿ (ನ್ಯೂಯಾರ್ಕ್), ಎ. 21: ಪ್ರಯಾಣಿಕನೊಬ್ಬ ‘‘ಬಾಂಬ್’’ ಎಂಬ ಪದವನ್ನು ಉಚ್ಚರಿಸಿದ ಬಳಿಕ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಯುನೈಟಡ್ ಏರ್‌ಲೈನ್ಸ್‌ನ ವಿಮಾನವೊಂದು ವಿಳಂಬವಾಗಿ ಹಾರಾಟ ನಡೆಸಿತು.

ಆ್ಯಲ್ಬಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೋರ್ವ ಪ್ರಯಾಣಿಕ ಈ ವಿಷಯವನ್ನು ವಿಮಾನ ಸಿಬ್ಬಂದಿಯ ಗಮನಕ್ಕೆ ತಂದನು ಎಂದು ಆ್ಯಲ್ಬಾನಿ ಕೌಂಟಿ ಶರೀಫ್ ಕ್ರೇಗ್ ಆ್ಯಪಲ್ ಹೇಳಿದರು.

‘ಬಾಂಬ್’ ಎಂದು ಹೇಳಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಮಾನವು ನ್ಯೂಜರ್ಸಿಯ ನೆವಾರ್ಕ್‌ಗೆ ತೆರಳುತ್ತಿತ್ತು. ವಿಮಾನದ ಸಂಪೂರ್ಣ ತಪಾಸಣೆಯಾಗಬೇಕು ಎಂಬುದಾಗಿ ಈ ಬೆಳವಣಿಗೆ ಸಂಭವಿಸಿದ ಬಳಿಕ ಪೈಲಟ್ ಮನವಿ ಮಾಡಿದರು.

ಎಲ್ಲ ಪ್ರಯಾಣಿಕರನ್ನು ಹಾಗೂ ಪ್ರತಿಯೊಂದು ವಸ್ತನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಕೆ-9 ಘಟಕಗಳು ವಿಮಾನದ ಶೋಧ ನಡೆಸಿದವು.
ಶೋಧದ ಬಳಿಕ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ವಿಮಾನ ತಡವಾಗಿ ಹಾರಾಟ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News