ಹಾಲಿವುಡ್ ನಟಿ ಲಿಂಡ್ಸೆ ಲೊಹಾನ್ ಇಸ್ಲಾಂಗೆ ?
ನಟಿ ಲಿಂಡ್ಸೆ ಲೋಹನ್ ಇಸ್ಲಾಮ್‌ನ ಅಧ್ಯಯನ ಮಾಡುತ್ತಿದ್ದರೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ಹೇಳಿವೆ. ಆದರೆ, ಈ ಬಗ್ಗೆ ವೌನವಾಗಿರಲು ಅವರು ನಿರ್ಧರಿಸಿದ್ದಾರೆ. ‘‘ನಾನು ತುಂಬಾ ಆಧ್ಯಾತ್ಮಿಕ ವ್ಯಕ್ತಿ ಹಾಗೂ ಯಾವುದೇ ಅಧ್ಯಯನಕ್ಕೆ ನಾನು ತೆರೆದುಕೊಂಡಿದ್ದೇನೆ’’ ಎಂದು ‘ದ ಸನ್’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕ್ಯಾಥೊಲಿಕ್ ನಟಿ ಹೇಳಿದ್ದಾರೆ.
‘‘ನಾನು ಅದನ್ನು ಓದಿ ಮುಗಿಸಿಲ್ಲ. ಅದನ್ನು ಓದಲಿಕ್ಕೆ ಎಷ್ಟು ಸಮಯ ಬೇಕು ಎಂದು ನಿಮಗೆ ಗೊತ್ತಿದೆಯೇ? ಅದಕ್ಕೆ ತುಂಬಾ ಸಮಯ ಬೇಕು’’ ಎಂದು ಲೋಹನ್ ಹೇಳಿರುವುದಾಗಿ ‘ಪೇಜ್ ಸಿಕ್ಸ್’ ವರದಿಯೊಂದು ತಿಳಿಸಿದೆ. ಅವರ ಪ್ರತಿನಿಧಿ ಹೀಗೆ ಹೇಳುತ್ತಾರೆ: ‘‘ಲಿಂಡ್ಸೆ ತುಂಬಾ ಆಧ್ಯಾತ್ಮಿಕ ವ್ಯಕ್ತಿ. ಎಲ್ಲ ಧರ್ಮಗಳು ಮತ್ತು ನಂಬಿಕೆಗಳನ್ನು ಪರೀಕ್ಷಿಸುವ ಮನೋಭಾವ ಅವರಲ್ಲಿದೆ. ಇತರರ ನಂಬಿಕೆಗಳ ಬಗ್ಗೆ ಅವರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಅಷ್ಟೆ’’.
ಲಿಂಡ್ಸೆ ಇಸ್ಲಾಂ ಸ್ವೀಕರಿಸುತ್ತಾರೋ ಇಲ್ಲವೋ ಬೇರೆ ವಿಷಯ. ಆದರೆ, ಅಮೆರಿಕದಲ್ಲಿ ಇಸ್ಲಾಂ ಸ್ವೀಕರಿಸಿದ ಖ್ಯಾತನಾಮರ ದೊಡ್ಡ ಪಟ್ಟಿಯೇ ಇದೆ. ಜಾನೆಟ್ ಜಾಕ್ಸನ್, ಕೇಶಿಯಸ್ ಕ್ಲೇ ಯಾನೆ ಬಾಕ್ಸರ್ ಮುಹಮ್ಮದ್ ಅಲಿ, ಮೈಕ್ ಟೈಸನ್, ಕ್ಯಾಟ್ ಸ್ಟೀವನ್ಸ್ ಅವರ ಪೈಕಿ ಕೆಲವರು.