×
Ad

ಫಿಲೊಮಿನಾದಲ್ಲಿ ಪ್ರತಿಭಾ ದಿನಾಚರಣೆ

Update: 2016-04-21 23:35 IST

ಪುತ್ತೂರು, ಎ.21: ಒಂದು ದೇಶದ ಪ್ರಗತಿಯನ್ನು ಆರ್ಥಿಕ ದೃಷ್ಟಿಕೋನದಿಂದ ಪರಿಗಣಿಸುವುದರೊಂದಿಗೆ, ಆ ದೇಶದ ಜನರಲ್ಲಿರುವ ನೈತಿಕತೆ ಮತ್ತು ವೌಲ್ಯಗಳನ್ನೂ ಗಮನಹರಿಸಬೇಕು. ಇಂದಿನ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳನ್ನು ತಾಂತ್ರಿಕತೆಯ ಮೂಲಕ ಬೆಳೆಸುತ್ತದೆ. ಈ ವ್ಯವಸ್ಥೆಯಲ್ಲಿ ವೌಲ್ಯಾಧಾರಿತ ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆ ಕಡಿಮೆಯಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ ಹೇಳಿದರು. ಸಂತ ಫಿಲೊಮಿನಾ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ಆಲ್ಫ್ರ್ರೆಡ್ ಜೆ. ಪಿಂಟೊ ವಹಿಸಿ ದ್ದರು. ವೇದಿಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ, ರೆ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ಪ್ರೊ.ಲಿಯೊ ನೊರೊನ್ಹ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ ರಾವ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ ಉಪಸ್ಥಿತರಿದ್ದರು. ಹ್ಯಾಡ್ಲಿ ವಿಲ್ಸನ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಇಬ್ರಾಹೀಂ ಬಿಲಾಲ್ ವರದಿ ವಾಚಿಸಿದರು. ಶಿಕ್ಷಾ ಶೆಟ್ಟಿ ವಂದಿಸಿದರು. ಎಲಿಜಬೆತ್ ಸೆಬಾಸ್ಟಿಯನ್ ಮತ್ತು ನಿಶಾ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News