×
Ad

ಕನ್ನಡದ ಕಲ್ಹಣ ಪ್ರಶಸ್ತಿ ಪ್ರದಾನ

Update: 2016-04-21 23:36 IST


ಬಂಟ್ವಾಳ, ಎ.21: ನೀರ್ಪಾಜೆ ಭೀಮ ಟ್ಟ ಅಭಿಮಾನಿ ಬಳಗ ಬಂಟ್ವಾಳ ವತಿಯಿಂದ ಕೊಡಮಾಡುವ ಕನ್ನಡದ ಕಲ್ಹಣ ಪ್ರಶಸ್ತಿ ಪ್ರದಾನ ಸಮಾರಂಭವು ಬಿ.ಸಿ.ರೋಡ್‌ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಾನದ ಮಿನಿಹಾಲ್‌ನಲ್ಲಿ ಇತ್ತೀಚೆಗೆ ಜರಗಿತು. ನೀರ್ಪಾಜೆ ಭೀಮ ಭಟ್ಟರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಹಿರಣ್ಯ ವೆಂಕಟೇಶ ಭಟ್ಟರು ಪುಷ್ಪಅರ್ಪಿಸಿದರು. ಶಿಲಾಂಜನ ಕ್ಷೇತ್ರ ಬಾಳೆಕೋಡಿಯ ಶಶಿಕಾಂತ ಮಣಿ ಸ್ವಾಮೀಜಿ ಭೀಮಟ್ಟರ ಸಂಸ್ಮರಣೆ ಮತ್ತು ಆಶೀರ್ವಚನ ನೀಡಿದರು. ಕನ್ನಡದ ಕಲ್ಹಣ ಪ್ರಶಸ್ತಿಗೆ ಭಾಜನರಾದ ಗಂಗಾ ಪಾದೆಕಲ್‌ರ ಪರಿಚಯ ಹಾಗೂ ಅಭಿನಂದನಾ ಭಾಷಣವನ್ನು ನಾಗವೇಣಿ ಮಂಚಿ ನೆರವೇರಿಸಿದರು. ಅಭಿನಂದನಾ ಪತ್ರವನ್ನು ಡಿ.ಬಿ.ಅಬ್ದುರ್ರಹ್ಮಾನ್ ವಾಚಿಸಿದರು. ಪ್ರಶಸ್ತಿ ಸ್ವೀಕರಿಸಿದ ಗಂಗಾ ಪಾದೆಕಲ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಾಜಿ ಜಿ.ಮುಹಮ್ಮದ್ ಹನೀಫ್ ಹಾಗೂ ಶಿವಶಂಕರ್ ಸಂದರ್ಬೋಚಿತವಾಗಿ ಮಾತನಾಡಿದರು. ಅಧ್ಯಕ್ಷ ಬಿ.ತಮ್ಮಯ್ಯ ಭೀಮಟ್ಟರ ಒಡನಾಟದ ಸವಿನೆನಪುಗಳನ್ನು ನೆನಪಿಸಿಕೊಂಡರು.ಕೆ.ನಾರಾಯಣ ಭಟ್ ಪ್ರಾಸ್ತಾವನೆಗೈದರು. ಕೊಳಕೆ ಗಂಗಾಧರ ಭಟ್ ಸ್ವಾಗತಿಸಿದರ. ಗಿರೀಶ್ ಭಟ್ ಅಜೆಕ್ಕಳ ಮತ್ತು ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ವಿ.ಸುಬ್ರಾಯ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News