ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವತಿಯಿಂದ ವಿಧವೆಯರಿಗೆ ಚೆಕ್ ವಿತರಣೆ

Update: 2016-04-22 06:37 GMT

ಉಳ್ಳಾಲ, ಎ. 22: ಎಸ್ಸೆಸೆಫ್ ತೊಕ್ಕೊಟ್ಟು ಸೆಕ್ಟರ್ ಇದರ ಆಶ್ರಯದಲ್ಲಿ ಸಂಕಷ್ಟಕೀಡಾಗಿರುವ ಬಡ ಕುಟುಂಬದ ವಿಧವೆಯರಿಗೆ ವಿಧವಾ ವೇತನವನ್ನು ನೀಡಲಾಯಿತು.

ಎಸ್‌ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವಾ ಹಾಜಿ ವಿಧವೆಯರಿಗೆ ವಿಧವಾ ವೇತನದ ಚೆಕ್‌ನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್‌ನ ಚಯರ್‌ಮ್ಯಾನ್ ಅಲ್ತಾಫ್ ಕುಂಪಲ, ರಿಲೀಫ್ ನ ಪ್ರಚಾರ ಸಮಿತಿಯ ಕನ್ವೀನರ್ ಉಮರಬ್ಬ ಕೈರಂಗಳ, ಎಸ್ಸೆಸೆಫ್ ತೊಕ್ಕೊಟ್ಟು ಸೆಕ್ಟರ್‌ನ ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News