ಕಾಸರಗೋಡು: ಸಿಪಿಎಂ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಕಾಸರಗೋಡು, ಎ. 22: ಕೇರಳ ವಿಧಾನಸಭಾ ಚುನಾವಣೆಯ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಸಿಪಿಎಂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಮಂಜೇಶ್ವರದ ಸಿಪಿಎಂ ಅಭ್ಯರ್ಥಿ ಸಿ . ಎಚ್ ಕುನ್ಚ೦ಬು ಮತ್ತು ತ್ರಿಕ್ಕರಿಪುರದ ಸಿಪಿಎಂ ಅಭ್ಯರ್ಥಿ ಎಂ. ರಾಜಗೋಪಾಲ್ ಇಂದು ಮಧ್ಯಾಹ್ನ ಚುನಾವಣಾಧಿಕಾರಿ ಇ . ದೇವದಾಸ್ ರಿಗೆ ನಾಮಪತ್ರ ಸಲ್ಲಿಸಿದ್ದು, ಮೊದಲ ದಿನವೇ ಎರಡು ನಾಮಪತ್ರ ಸಲ್ಲಿಕೆ ಯಾಗಿವೆ.
ವಿದ್ಯಾನಗರದಲ್ಲಿರುವ ಸಿಪಿಎಂ ಪಕ್ಷದ ಜಿಲ್ಲಾ ಕಚೇರಿ ಯಿಂದ ಬೆಂಬಲಿಗರ ಮೆರವಣಿಗೆ ಮೂಲಕ ತೆರಳಿದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ . ಪಿ ಸತೀಶ್ಚ೦ದ್ರನ್, ಪಿ. ರಾಘವನ್ , ಎಂ . ವಿ ಬಾಲಕೃಷ್ಣನ್ ಮಾಸ್ಟರ್, ಕೆ . ವಿ ಕುನ್ಚಿ ರಾಮನ್, ಕೆ . ಕುನ್ಚಿರಾಮನ್, ಗೋವಿಂದನ್ ಪಲ್ಲಿಕಾಪಿಲ್, ಟಿ. ಕೃಷ್ಣನ್ , ಬಿ . ವಿ ರಾಜನ್ , ಸಿ .ಪಿ ಬಾಬು , ಎಂ . ಅನಂತನ್ ನಂಬ್ಯಾರ್, ಕೃಷ್ಣನ್ ನಾಯರ್ , ಎನ್. ಪಿ ದಾಮೋದರನ್ , ಅಜೀಜ್ ಕಡಪ್ಪುರ, ಕೆ. ಎಸ್ ಫಕ್ರುದ್ದೀನ್ ಮೊದಲಾದವರು ಜೊತೆ ಗಿದ್ದರು.
ಎಡರಂಗದ ಉಳಿದ ಅಭ್ಯರ್ಥಿಗಳಾದ ಕೆ . ಕುನ್ಚಿ ರಾಮನ್ ( ಉದುಮ), ಡಾ . ಎ . ಎ ಅಮೀನ್ ( ಕಾಸರಗೋಡು ) , ಇ . ಚಂದ್ರಶೇಖರನ್ ( ಕಾಞ೦ಗಾಡ್) ಎಪ್ರಿಲ್ 25 ರಂದು ನಾಮಪತ್ರ ಸಲ್ಲಿಸುವರು.