×
Ad

ನಿರ್ಗತಿಕ ರೋಗಿಗಳ ಮಸೀಹಾ ವೈದ್ಯರು, ಸ್ವಯಂ ತಾನೆ ಚಿಕಿತ್ಸೆಗೆ ಹಣ ತುಂಬುತ್ತಿದ್ದಾರೆ!

Update: 2016-04-22 15:28 IST

ಹೊಸದಿಲ್ಲಿ, ಎಪ್ರಿಲ್ 22: ವೈದ್ಯಕೀಯ ಕಲಿತರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ಭಾವಿಸುವವರೇ ಹೆಚ್ಚು. ಇದೇ ರೀತಿ ರವೀಂದ್ರ ಕೊಲ್ಹೆಯವರ ತಂದೆ ತಾಯಿ ಭಾವಿಸಿ ಮಗನಿಗೆ ಡಾಕ್ಟರಿಕೆ ಕಲಿಸಿರಲೂಬಹುದು. ಆದರರೆ ರವೀಂದ್ರಕೊಲ್ಹೆ ಕಾಲೇಜಿನಿಂದ ಹೊರಬಂದ ಮೇಲೆ ಚಿಕಿತ್ಸಾ ಲೋಕದ ನೈಜ ಶುಶ್ರೂಷೆಗಿಳಿದರು. ಅವರಿಗೆ ಎಲ್ಲದ್ದಕ್ಕಿಂತ ಮೊದಲು ರೋಗಿಗಳು ಮಾತ್ರ ಕಾಣಿಸುತ್ತಾರೆ. ಅವರ ಬಳಿ ರೋಗಿಗಳಲ್ಲದೆ ಬೇರೇನೂ ಇಲ್ಲ.

 ಮಹಾತ್ಮ ಗಾಂಧಿ, ವಿನೋಬಾ ಭಾವೆ ಮತ್ತು ರಸ್ಕಿನ್ ಬಾಂಡ್ ವಿಚಾರಗಳಿಂದ ಪ್ರಭಾವಿತರಾಗಿರುವ ಕೊಲ್ಹೆ ಮಾನವರಿಗಾಗಿ ಕೆಲಸ ಮಾಡಲು ನಿರ್ಧರಿಸಿದರು. ಹೆಚ್ಚು ಬಡವರು ಮತ್ತು ನಿರ್ಗತಿಕರ ಬಳಿ ಹೋಗಿ ತನ್ನ ವೈದ್ಯಕೀಯವನ್ನು ಪ್ರಾರಂಭಿಸಿದರು.

ಗುಜರಾತ್ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಹೋಗಿ ಅವರು ಬಡ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಮಹಾರಾಷ್ಟ್ರದ ನಕ್ಸಲ್ ಪ್ರಭಾವಿತ ಗಡ್‌ಚಿರೌಲಿಯಲ್ಲಿ ಹಿಂದುಳಿದವರಿಗೆ ಚಿಕಿತ್ಸೆ ನೀಡಿದರು. ಅವರ ತಾಯಿ ಮಹಾರಾಷ್ಟ್ರದ ಮೆಲ್‌ಘಾಟ್‌ನಲ್ಲಿ ಕೆಲಸ ಮಾಡಲು ಸಲಹೆ ನೀಡಿದರು. ಇಲ್ಲಿಯೂ ಬಡವರಿದ್ದಾರೆ ಮತ್ತು ನಕ್ಸಲರ ಹಾವಳಿ ಇರಲಿಲ್ಲ.ಕೊಲ್ಹೆ ಮೆಲ್‌ಘಾಟ್‌ನಲ್ಲಿ ತನ್ನ ಮನೆ ಮಾಡಿದರು. ಅಲ್ಲಿನ ನಿರ್ಗತಿಕ ಬಡ ಉಪೇಕ್ಷಿಸಲ್ಪಟ್ಟ ಜನರಿಗೆ ಚಿಕಿತ್ಸೆ ನೀಡಿದರು.ಈವತ್ತಿಗೂ ಕೊಲ್ಹೆ ರೋಗಿಗಳಿಂದ ಎರಡು ರೂಪಾಯಿ ಫೀಸು ಪಡೆಯುತ್ತಾರೆ. ಎರಡನೆ ಸಲ ಬಂದರೆ ಒಂದೇ ರೂಪಾಯಿ ಫೀಸು!

ಕೊಲ್ಹೆ ಸಮಾಜಕ್ಕೆ ತನ್ನ ಸೇವೆಯ ಅಗತ್ಯವನ್ನು ಮನಗಂಡಿದ್ದಾರೆ. ಮೇಲ್‌ಘಾಟ್‌ನಕೊರಕು ಜನಾಂಗ ಸರಕಾರದಿಂದ ನಿರ್ಲಕ್ಷಿಸಲ್ಪಟಾಗ ಕೊಲ್ಹೆ ಸರಕಾರವನ್ನು ಕೋರ್ಟ್‌ಗೆ ಎಳೆದರು. 1973-74ರಲ್ಲಿ ಟೈಗರ್ ಪ್ರಾಜೆಕ್ಟ್ ಗಾಗಿ ಟೈಗರ್ ರಿಸರ್ವ್ ವೈಲ್ಡ್‌ಲೈಫ್ ಸೆಂಚುರಿ ಮಾಡುವ ಘೋಷಣೆ ಹೊರಬಿತ್ತು. ಕೆಲವು ವರ್ಷ ಅಲ್ಲಿ ವನ್ಯಜೀವಿ ಅಭಯಾರಣ್ಯ ಬೋರ್ಡ್ ಹಾಕಲಾಗಿತ್ತು. ಪ್ರವಾಸಿಗರೂ ಬರತೊಡಗಿದ್ದರು ಆದರೆ ಈ ಪ್ರದೇಶದ 61 ಗ್ರಾಮಗಳಲ್ಲಿ ಈಗಲೂ ಸರಿಯಾದ ರಸ್ತೆಯೂ ಇಲ್ಲ. ಕಾಡು ತುಂಬಿದ ದುರ್ಗಮ ರಸ್ತೆಯಲ್ಲಿ ಜನರು ಓಡಾಡಬೇಕಾಗಿದೆ. ಆಧುನಿಕ ಜೀವನದ ಸುಖ ಸೌಲಭ್ಯ ತುಂಬ ದೂರವಾಗಿರುವ ಇಲ್ಲಿ ವಿದ್ಯುತ್ ಕೂಡಾ ಇಲ್ಲ ಇಂತಹ ಜನರ ನಡುವೆ ಅವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಹಿಂದುಳಿದ ತೀರಾಬಡವ ಮತ್ತು ನಿರ್ಲಕ್ಷಿಸಲ್ಪಟ್ಟ ಜನರ ಸೇವೆ ಕೊಲ್ಹೆ ಠೊಂಕ ಕಟ್ಟಿ ನಿಂತರು. ಇಲ್ಲಿ ಮಕ್ಕಳು ಹುಟ್ಟಿದರೆ ಹುಟ್ಟಿದ ಕೂಡಲೇ ಸಾಯುತ್ತಿತು. ಪೌಷ್ಟಿಕಾಂಶಗಳ ಕೊರತೆ ಅವರ ಜೀವ ತೆಗೆಯುತ್ತಿತ್ತು. ಇಂತಹ ಜನರ ನಡುವೆ 31ವರ್ಷ ಮೊದಲು ಕೊಲ್ಹೆ ಬಂದರು. ಅವರ ಕೆಲಸದ ಪ್ರಭಾವದಿಂದಾಗಿ ಈಗ ಗ್ರಾಮದ ಜನರಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಜನರು ಅವರನ್ನು ಮಸೀಹಾ ಎಂದೆ ತಿಳಿದಿದ್ದಾರೆ. ರೋಗಿಗಳಲ್ಲಿ ಹಣವಿಲ್ಲದಿದ್ದರೆ ತಾನೆ ಹಣ ತೆತ್ತು ಔಷಧ ಒದಗಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News