×
Ad

ಬರ ಪೀಡಿತ ಬೀಡ್ ನಲ್ಲಿ ನೀರು ತರಲು ಹೋಗಿ ಬಾವಿಗೆ ಕಾಲು ಜಾರಿ ಬಿದ್ದ ಬಾಲಕ

Update: 2016-04-22 15:54 IST

ಮುಂಬೈ : ಮರಾಠವಾಡ ಜಿಲ್ಲೆಯ ಬರಪೀಡಿತ ಬೀಡ್ ಜಿಲ್ಲೆಯಲ್ಲಿ ಬಾವಿಯೊಂದರಿಂದ ನೀರು ಸೇದುತ್ತಿದ್ದ 11 ವರ್ಷದ ಬಾಲಕನೊಬ್ಬ ಕಾಲು ಜಾರಿ ಬಾವಿಯೊಳಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ವರದಿಯಾಗಿದೆ. ಕಳೆದಎರಡು ದಿನಗಳಿಂದನಡೆದ ಇಂತಹ ಎರಡನೇ ದಾರುಣ ಘಟನೆ ಇದಾಗಿದೆ.

ಕೇಜ್ ತೆಹಸಿಲ್ ನ ವಿಡಾ ಗ್ರಾಮದ ಬಾಲಕ ಸಚಿನ್ ಗೋಪಿನಾಥ್ ಕೇದಾರ್ತನ್ನ ಮನೆಯಿಂದ ಸುಮಾರು ಅರ್ಧ ಕಿ.ಮಿ. ದೂರದಲ್ಲಿರುವ ಬಾವಿಯಿಂದ ನೀರು ಸೇದುತ್ತಿದ್ದಾಗಈ ಘಟನೆ ನಡೆದಿದೆ. ಮಂಗಳವಾರದಂದು ಬೀಡ್ ಜಿಲ್ಲೆಯಸಬಲ್ ಖೆಡ್ ಗ್ರಾಮದ ಹನ್ನೆರಡು ವರ್ಷದ ಬಾಲಕಿಯೋಗಿತಾ ಅಶೋಕ್ ದೇಸಾಯಿ ಕೈಪಂಪೊಂದರಿಂದ ನೀರೆತ್ತಲು ಐದು ಬಾರಿ ಪ್ರಯತ್ನಿಸಿದ ನಂತರಬಿಸಿಲ ಝಳ ತಡೆಯಲರದೆ ಕುಸಿದು ಬಿದ್ದು ಮೃತಪಟ್ಟಿದ್ದಳು. ಆಗ ಆ ಪ್ರದೇಶದಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು.

ಮರಾಠವಾಡ ಜಿಲ್ಲೆಯಲ್ಲಿ ನೀರಿನ ಬರ ಎಷ್ಟು ಗಂಭಿರವಾಗಿದೆಯೆಮದರೆ, ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ಸದಸ್ಯನು, ಮುಖ್ಯವಾಗಿ ಮಕ್ಕಳು ನೀರು ತರಲು ಹಲವು ಬಾರಿ ನೀರಿನ ಟ್ಯಾಂಕರುಗಳು ಹಾಗು ಬೋರ್ ವೆಲ್ಲುಗಳಬಳಿ ಹೋಗಬೇಕಾಗಿ ಬಂದಿದೆ.

ಮರಾಠವಾಡ ಜಿಲ್ಲೆಯ ಜಲಾಶಯಗಳಲ್ಲಿ ಕೇವಲ 3%ದಷ್ಟು ನೀರು ಮಾತ್ರ ಉಳಿದಿದೆಯೆಂದು ಔರಂಗಾಬಾದ್ ವಿಭಾಗೀಯ ಆಯುಕ್ತ ಉಮಾಕಾಂತ್ ದಂಗತ್ ಹೇಲಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ 939 ನೀರಿನ ಟ್ಯಾಂಕರುಗಳನ್ನು ಜನರ ಸೇವೆಗಾಗಿ ಮೀಸಲಿರಿಸಲಾಗಿದ್ದರೆ ಈ ಬಾರಿ ಆಡಳಿತ 2,745 ಟ್ಯಾಂಕರುಗಳಲ್ಲಿ ಗ್ರಾಮಸ್ಥರಿಗೆ ನೀರು ಸರಬರಾಜು ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News