×
Ad

ಅಬುದಾಬಿಯಲ್ಲಿ ರಸ್ತೆ ಅಪಘಾತ : ಕಾಸರಗೋಡು ತಳಂಗರೆ ನಿವಾಸಿ ಬಲಿ

Update: 2016-04-22 18:02 IST

ಕಾಸರಗೋಡು : ಅಬುದಾಬಿ ಯಲ್ಲಿ  ನಡೆದ ರಸ್ತೆ ಅಪಘಾತದಲ್ಲಿ ಕಾಸರಗೋಡು ತಳಂಗರೆ ನಿವಾಸಿಯೊಬ್ಬರು ಮ್ರತಪಟ್ಟ ಘಟನೆ  ನಡೆದಿದೆ.

ಮ್ರತಪಟ್ಟ ವರು ತಳ೦ಗರೆಯ  ನೂಅಮಾನ್  (26) ಎಂದು ತಿಳಿದುಬಂದಿದೆ. 

ಅಬುದಾಬಿಯ ಅಂಗಡಿಯೊಂದರಲ್ಲಿ  ಮಾರ್ಕೆಟಿಂಗ್  ಎಕ್ಸಿಕ್ಯೂಟಿವ್  ಆಗಿದ್ದರು.

ಗುರುವಾರ ರಾತ್ರಿ ಕೆಲಸ ಮುಗಿಸಿ ವ್ಯಾನ್ ನಲ್ಲಿ  ವಾಸ ಸ್ಥಳಕ್ಕೆ  ತೆರಳುತ್ತಿದ್ದಾಗ ಇನ್ನೊಂದು ಕಾರು  ಡಿಕ್ಕಿ ಹೊಡೆದು ಈ ಅಪಘಾತ  ಸಂಭವಿಸಿದೆ.

ಗಂಭೀರ ಗಾಯಗೊಂಡ ಇವರು ಚಿಕಿತ್ಸೆಗೆ  ಸ್ಪಂದಿಸದೆ ಇಂದು ( ಶುಕ್ರವಾರ) ಮ್ರತಪಟ್ಟಿ ರುವುದಾಗಿ ಮನೆಯವರಿಗೆ  ಮಾಹಿತಿ ಲಭಿಸಿದೆ.

ಮ್ರತದೇಹವನ್ನು ಊರಿಗೆ ತರುವ ಸಿದ್ದತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News