ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ
Update: 2016-04-22 18:21 IST
ಮಂಗಳೂರು,ಎ.22: ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್ ಕಾರ್ಯಾಲಯಕ್ಕೆ 2016-17ನೇ ಸಾಲಿಗೆ ಗ್ರೂಪ್ ಡಿ ಸಿಬ್ಬಂದಿ ಸೇವೆಯನ್ನು ಹೊರ ಸಂಪನ್ಮೂಲ ಏಜನ್ಸಿಯಿಂದ ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ.
ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್ ಕಾರ್ಯಾಲಯಕ್ಕೆ 2016-17ನೇ ಸಾಲಿಗೆ ಗ್ರೂಪ್ ಡಿ ಸಿಬ್ಬಂದಿ ಸೇವೆಯನ್ನು ಹೊರ ಸಂಪನ್ಮೂಲ ಏಜನ್ಸಿಯಿಂದ ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಫಾರಂಗಳನ್ನು ಏ. 18 ರಿಂದ ಮೇ 2 ರ ವರೆಗೆ ಮಾರಾಟ ಮಾಡಲಾಗುವುದು. ಮೇ 3 ಮಧ್ಯಾಹ್ನ 12 ಗಂಟೆಗೆ ಭರ್ತಿ ಮಾಡಿದ ಟೆಂಡರ್ ಫಾರಂಗಳನ್ನು ಸಲ್ಲಿಸಲು ಕೊನೆಯ ದಿನಾಂಕ. ಮೇ 3 ರಂದು ಮಧ್ಯಾಹ್ನ 1.00 ಗಂಟೆಗೆ ಟೆಂಡರ್ ಫಾರಂಗಳನ್ನು ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್, ದೂರವಾಣಿ ಸಂಖ್ಯೆ: 0824-2478930.ಇವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.