ಉಳ್ಳಾಲ: ಕುಂಪಲ ಕೇಸರಿ ಮಿತೃ ವೃಂದ ಅಧ್ಯಕ್ಷರಾಗಿ ನವೀನ್ ಕುಜುಮಗದ್ದೆ
Update: 2016-04-22 19:17 IST
ಉಳ್ಳಾಲ,ಎ.20: ಕುಂಪಲ ಕೇಸರಿ ಮಿತೃ ವೃಂದ ಇದರ ಅಧ್ಯಕ್ಷರಾಗಿ ನವೀನ್ ಕುಜುಮಗದ್ದೆ ಆಯ್ಕೆಯಾದರು 2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಗಣೇಶ್ ಕೆ.ಎನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಪಾಧ್ಯಕ್ಷರುಗಳಾಗಿ ಹರಿಶ್ಚಂದ್ರ ಸೈಟ್, ಹರೀಶ್ಚಂದ್ರ ಕುಜುಮಗದ್ದೆ, ಕಾರ್ಯದರ್ಶಿಯಾಗಿ ಸಂದೀಪ್, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಸೈಟ್, ಶಶಿಧರ್, ಕೋಶಾಧಿಕಾರಿಯಾಗಿ ವಿನ್ಯಾಸ್ ಪಿ ಬೋಳಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್, ಗೌತಮ್, ಕ್ರೀಡಾ ನಾಯಕನಾಗಿ ಜ್ಞಾನೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತಿನ್ ಜಿ, ನಿತಿನ್.ಎನ್, ಸಂಘಟನಾ ಕಾರ್ಯದರ್ಶಿಯಾಗಿ ಸುಮೇಶ್ ಕುಂಪಲ ಇವರನ್ನು ಆಯ್ಕೆಮಾಡಲಾಯಿತು.