×
Ad

ಮಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನಾಪತ್ತೆ

Update: 2016-04-22 22:19 IST

ಮಂಗಳೂರು , 22 :ನಗರದ ಕರಾವಳಿ ಕಾಲೇಜಿನಲ್ಲಿ 3 ನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಕೌಶಿಕ್ ಭಟ್ ಎಂಬ ವಿದ್ಯಾರ್ಥಿ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಎ.19 ರಿಂದ ನಾಪತ್ತೆಯಾಗಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜಿಗೆಂದು ಮನೆಯಿಂದ ತೆರಳಿದ ಬಳಿಕ ಕೌಶಿಕ್ ಭಟ್ ವಾಟ್ಸಪ್ ಮೆಸೆಜ್ ಮಾಡಿ ನನಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಸಾಕಷ್ಟು ಖರ್ಚು ಮಾಡಿದ್ದೀರಿ. ಆದರೆ ನಾನದಕ್ಕೆ ಅರ್ಹನಲ್ಲ,ನನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News