ಇಂಗ್ಲೆಂಡ್ ಕ್ರಿಕೆಟಿಗ ಟೇಲರ್ ಆಸ್ಪತ್ರೆಯಿಂದ ಬಿಡುಗಡೆ
ಲಂಡನ್, ಎ.22: ತನ್ನ ವೃತ್ತಿಜೀವನದ ಅಕಾಲಿಕ ಅಂತ್ಯಕ್ಕೆ ಕಾರಣವಾದ ಹೃದ್ರೋಗಕ್ಕೆ ಸಂಬಂಧಿಸಿ ಪ್ರಾಥಮಿಕ ಹಂತದ ಚಿಕಿತ್ಸೆ ಪೂರೈಸಿರುವ ಇಂಗ್ಲೆಂಡ್‌ನ ಮಾಜಿ ದಾಂಡಿಗ ಜೇಮ್ಸ್ ಟೇಲರ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
26ರ ಹರೆಯದ ನಾಟಿಂಗ್‌ಹ್ಯಾಮ್‌ಶೈರ್‌ನ ಮಧ್ಯಮ ಕ್ರಮಾಂಕದ ದಾಂಡಿಗ ಟೇಲರ್ ಹಠಾತ್ ಸಾವಿಗೆ ಕಾರಣವಾಗಬಲ್ಲ ಹೃದಯದ ಸಮಸ್ಯೆಗೆ ಸಿಲುಕಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರನೆ ನಿವೃತ್ತಿ ಘೋಷಿಸಿದ್ದರು.
ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದ ಟೇಲರ್, ಆಸ್ಪತ್ರೆಯ ಕಟ್ಟಡದ ಹೊರಗೆ ತೆಗೆದಿರುವ ಫೋಟೊವನ್ನು ಟ್ವೀಟ್‌ಪೇಜ್‌ನಲ್ಲಿ ಹಾಕಿದ್ದಾರೆ. ಅಸೌಖ್ಯದಿಂದಾಗಿ ಇತ್ತೀಚೆಗೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ನಾಟಿಂಗ್‌ಹ್ಯಾಮ್‌ಶೈರ್ ಹಾಗೂ ಇಂಗ್ಲೆಂಡ್ ತಂಡದ ದಾಂಡಿಗ ಜೇಮ್ಸ್ ಟೇಲರ್ ಇನ್ನು ಮುಂದೆ ಮನೆಯಲ್ಲಿ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲಿದ್ದಾರೆ.
ಮುಂದಿನ ಚಿಕಿತ್ಸೆಯ ತನಕ ನಿರಂತರವಾಗಿ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ನಾಟಿಂಗ್‌ಹ್ಯಾಮ್‌ಶೈರ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.