×
Ad

ವಿಶ್ವದ ಅತ್ಯಂತ ವೇಗದ ಎಸ್ ಯು ವಿ ಭಾರತಕ್ಕೆ. ಬೆಲೆ ಕೇವಲ 4 ಕೋಟಿ ರೂ. !

Update: 2016-04-23 11:49 IST

ಹೊಸದಿಲ್ಲಿ, ಎ. 23: ವಿಶ್ವದ ಅತ್ಯಂತ ವೇಗದ  ವಿಲಾಸಿ ಎಸ್ ಯು ವಿ ಭಾರತಕ್ಕೆ ಬಂದಿದೆ !

ಅತ್ಯಂತ ವಿಲಾಸಿ ಕಾರುಗಳ ಕಂಪೆನಿ ಬೆಂಟ್ಲಿ ಶುಕ್ರವಾರ ತನ್ನ ಪ್ರಪ್ರಥಮ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್  'ಬೆಂಟೈಗ'  ವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದರ ಬೆಲೆ ಕೇವಲ 3.85 ಕೋಟಿ ರೂಪಾಯಿ ( ದೆಹಲಿ ಎಕ್ಸ್ ಶೋ ರೂಂ ಬೆಲೆ ) !

ಕಂಪೆನಿಯ ಭಾರತದ ಡೀಲರ್ ಎಕ್ಸ್ ಕ್ಲೂಸಿವ್ ಮೋಟರ್ಸ್ ಪ್ರಕಾರ ಈಗಾಗಲೇ ಈ ದುಬಾರಿ ಕಾರಿಗೆ ನೂರಾರು ಬುಕ್ಕಿಂಗ್ ಆಗಿದ್ದು ಮುಂದಿನ ಎರಡು ವಾರಗಳಲ್ಲಿ ಅದು ಭಾರತದ ರಸ್ತೆಗಳಲ್ಲಿ ಮಿಂಚಲಿದೆ. 

ಈ ಎಸ್ ಯು ವಿ ಯಲ್ಲಿ  6 ಲೀಟರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಇಂಜಿನ್ ಇದ್ದು ಸೊನ್ನೆಯಿಂದ 60 ಮೈಲುಗಳ ವೇಗವನ್ನು ಕೇವಲ 4 ಸೆಕೆಂಡುಗಳಲ್ಲಿ ಗಳಿಸಲಿದೆ. ಇದರ ಗರಿಷ್ಠ ವೇಗ ಗಂಟೆಗೆ  301ಕಿಮಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News