ವಾಹನ ಪಲ್ಟಿ: ಅಕ್ರಮ ಸಾಗಾಟದ ಜಾನುವಾರು ಸಾವು
Update: 2016-04-23 12:41 IST
ಬೆಳ್ತಂಗಡಿ, ಎ. 23: ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಅಕ್ರಮ ದನ ಸಾಗಾಟ ಮಾಡುತ್ತಿದ್ದ ನೋಂದಣಿ ಸಂಖ್ಯೆ ಇಲ್ಲದ ಟ.ಟಿ ವಾಹನ ಮಗುಚಿ ಬಿದ್ದಿದ್ದು ವಾಹನದಲ್ಲಿ ಸಾಗಾಟ ಮಾಡಲಾಗುತ್ತಿದ್ದ ದನಗಳು ಸತ್ತ ರೀತಿಯಲ್ಲಿ ಪತ್ತೆಯಾಗಿದೆ.
ವಾಹನ ಮಗುಚಿ ಬಿದ್ದ ಸಂದರ್ಭ ಅದರಲ್ಲಿದ್ದವರು ಪರಾರಿಯಾಗಿದ್ದು ವಾಹನ ಹಾಗೂ ದನಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.