×
Ad

ಕಾಸರಗೋಡು: ಅಧಿಕಾರ ಉಳಿಸಬೇಕೆಂದು ಕಾಂಗ್ರೆಸ್ ಬಿಜೆಪಿಯೊಂದಿಗೆ ರಹಸ್ಯ ಮೈತ್ರಿ- ಕೊಡಿಯೇರಿ ಬಾಲಕೃಷ್ಣನ್

Update: 2016-04-23 12:55 IST

ಕಾಸರಗೋಡು, ಎ. 23:  ಅಧಿಕಾರ ಉಳಿಸಬೇಕೆಂದು  ಹವಣಿಸಿತ್ತಿರುವ ಕಾಂಗ್ರೆಸ್  ಬಿಜೆಪಿಯೊಂದಿಗೆ ರಹಸ್ಯ ಮೈತ್ರಿ  ಮಾಡಿಕೊಂಡಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್  ಹೇಳಿದರು .

ಅವರು ಶನಿವಾರ ಕಾಸರಗೋಡು  ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು .

ಅಧಿಕಾರ  ಉಳಿಸಲು ಕಾಂಗ್ರೆಸ್ ಒಂದೆಡೆ ತಂತ್ರ  ಹೆಣೆಯುತ್ತಿದ್ದರೆ ಇನ್ನೊಂದೆಡೆ ಹೇಗಾದರೂ ಖಾತೆ ತೆರೆಯಬೇಕೆಂದು ಬಿಜೆಪಿ ಹವಣಿಸುತ್ತಿದೆ . ಇದರಿಂದ ಉಭಯ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಜಿಲ್ಲೆಯ  ಮಂಜೇಶ್ವರ, ಉದುಮ ವಿಧಾನಸಭಾ ಕ್ಷೇತ್ರ ಸೇರಿದಂತೆ 10 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಇಂತಹ ಒಪ್ಪಂದ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಸದ ಪಿ. ಕರುಣಾಕರನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಸತೀಶ್ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News