×
Ad

ಕಿನ್ನಿಗೋಳಿ: ಇಲ್ಲಿನ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ತ್ರಿದಶಮಾನೋತ್ಸವ ಸಮಾರಂಭ

Update: 2016-04-23 16:26 IST

ಕಿನ್ನಿಗೋಳಿ, ಎ.23: ಇಲ್ಲಿನ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ತ್ರಿದಶಮಾನೋತ್ಸವ ಸಮಾರಂಭ ಎಪ್ರಿಲ್ 24 ರಿಂದ 25 ರವರೆಗೆ ಕಿನ್ನಿಗೋಳಿಯ ರಾಜರತ್ನಪುರದ ಸರಾಫ್ ಅಣ್ಣಯಾಚಾರ್ಯ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ ಹೇಳಿದರು.

ಕಿನ್ನಿಗೋಳಿಯ ರಾಜರತ್ನಪುರದ ಸರಾಫ್ ಆಣ್ಣಯಾಚಾರ್ಯ ಸಭಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಎ.24 ರಂದು ಸಂಘದ ತ್ರಿದಶಮಾನೋತ್ಸವ ಹಾಗೂ ಸಭಾಭವನದ ಪಂಚಮ ವರ್ಷದ ಪ್ರಯುಕ್ತ ಸಮಾಜದ ಯುವಕ ಸಂಘ ಹಾಗೂ ಮಹಿಳಾ ಮಂಡಲಗಳಿಗೆ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತ್ರಿದಶಮಾನೋತ್ಸವದ ಸವಿ ನೆನಪಿಗಾಗಿ ಎ.25ರಂದು ಆನೆಗೊಂದಿ ಸಂಸ್ಥಾನದ ಪೀಠಾಧೀಶ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಉಚಿತ ಸಾಮೂಹಿಕ ಉಪನಯನ, ಬಯಲು ರಂಗ ವೇದಿಕೆಗೆ ಶಿಲಾನ್ಯಾಸ ಜರಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳದ ಶ್ರೀ ನೆಕ್ಲಾಜೆ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಕೆ ಹರೀಶ್ ಆಚಾರ್ಯ ವಹಿಸಲಿದ್ದಾರೆ, ಕಟಪಾಡಿಯ ಶ್ರೀ ನಾಗಧರ್ಮೇಂದ್ರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಪಿ ವಿ ಸುಂದರ ಆಚಾರ್ಯ, ಮಂಗಳೂರಿನ ಕಾಳಿಕಾಂಬಾ ದೇವಳ ಮೊಕ್ತೇಸರ ಉದಯ ಕುಮಾರ್ ಆಚಾರ್ಯ ಭಾಗವಹಿಸಲಿದ್ದಾರೆ.

ಮದ್ಯಾಹ್ನ ಯಕ್ಷಗಾನ ನಾಟ್ಯ ವೈಭವ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭದಲ್ಲಿನ ಅಧ್ಯಕ್ಷತೆಯನ್ನು ಬೆಂಗಳೂರಿನ ನಿವೃತ್ತ ಪ್ರಿನ್ಸಿಪಾಲ್ ಕೆ ಎ ಗಂಗಾಧರ ಆಚಾರ್ಯ ವಹಿಸಲಿದ್ದಾರೆ. ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ  ಶುಭಾಶಂಸನೆಗೈಯಲಿದ್ದಾರೆ. ರಾಜ್ಯ ಸರ್ಕಾರದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಕೆ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ. ಪಂ. ಸದಸ್ಯೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಸುಧಾಕರ್, ದುಬೈ ವಿಶ್ವ ಕರ್ಮ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಕೆ ಶಾಂತರಾಮ ಆಚಾರ್ಯ, ಕೊಲಕಾಡಿ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಕೆ ವಿಶ್ವನಾಥ ಆಚಾರ್ಯ, ಪಾವಂಜೆ ಶ್ರೀ ವಹಾಲಿಂಗೇಶ್ವರ ದೇವಳದ ಮೊಕ್ತೇಸರ ಬಿ ಸೂರ್ಯ ಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಟಪಾಡಿಯ ವೇದಮೂರ್ತಿ ಎನ್ ಶ್ರೀಧರ್ ಪುರೋಹಿತ್,ಕಾರ್ಕಳದ ನಿವೃತ್ತ ಉಪ ತಹಶೀಲ್ದಾರ್ ಕೆ ವಸಂತ ಆಚಾರ್ಯ ಮತ್ತು ನಿವೃತ್ತ ಶಿಕ್ಷಕ ಅಚ್ಯುತ ಆಚಾರ್ಯ ಕೊಲಕಾಡಿ ಅವರನ್ನು ಸನ್ಮಾನಿಸಲಾಗುವುದು. ಯುವ ಪ್ರತಿಭೆ ಸ್ಯಾಕ್ಸೋ ಫೋನ್ ವಾದಕ ಸತೀಶ್ ಆಚಾರ್ಯ ಸುರುಳಿ, ಮಂಗಳೂರಿನ ವೈದ್ಯಾಧಿಕಾರಿ ಡಾ ತ್ರಿವೇಣಿ ಆಚಾರ್ಯ ಬಳ್ಕುಂಜೆ ತಾ. ಪಂ. ಸದಸ್ಯೆ ರಶ್ಮಿ ಸತೀಶ್ ಆಚಾರ್ಯ ಅವರನ್ನು ಗೌರವಿಸಲಾಗುವುದು. ಸಭಾ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಎಂ ಪ್ರಥ್ವೀರಾಜ್ ಆಚಾರ್ಯ ತಿಳಿಸಿದರು.

ಸಮಿತಿಯ ಕಾರ್ಯದರ್ಶಿ ಕೆ ಬಿ ಸುರೇಶ್,ಉಪಾಧ್ಯಕ್ಷ ಕೆ ಶಿವರಾಮ ಆಚಾರ್ಯ,ಮಹಿಳಾ ಮಂಡಳಿ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ, ಸಂಘದ ಸ್ಥಾಪಕಧ್ಯಕ್ಷ ಕೆ ಎಸ್ ಉಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News