ಸುಳ್ಯ: ಶಿಕ್ಷಣದ ಮೂಲಕ ವಿಶ್ವಮಾನವತ್ವ - ವಿ.ಎಸ್.ಉಗ್ರಪ್ಪ
ಸುಳ್ಯ: ಶಿಕ್ಷಣಕ್ಕೆ ಜಾತಿ. ಮತ, ಧರ್ಮಗಳ ಹಂಗಿಲ್ಲ. ಇವನ್ನೆಲ್ಲಾ ಮೀರಿ ಶಿಕ್ಷಣದ ಮೂಲಕ ವಿಶ್ವ ಮಾನವತೆ ಸಾಧಿಸಲು ಸಾಧ್ಯ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಅರಂತೋಡಿನ ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ನಡೆಸಲ್ಪಡುವ ತೆಕ್ಕಿಲ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಂಗ್ಲ ಮಾದ್ಯಮ ಪ್ರೌಡಶಾಲೆ ಗೂನಡ್ಕ ಇದರ ದಶಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಪ್ಪತ್ತೊಂದನೇ ಶತಮಾನ ಶಿಕ್ಷಣ ಮತ್ತು ಜ್ಞಾನದ ಯುಗ. ಶಿಕ್ಷಣದಿಂದ ವಂಚಿತರಾದರೆ ಯಾರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಿಲ್ಲ. ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಿ ಅವರನ್ನು ಸಂಸ್ಕಾರವಂತರನ್ನಾಗಿ ರೂಪಿಸುವುದು ಎಲ್ಲರ ಜವಾಬ್ದಾರಿ ಎಂದು ಉಗ್ರಪ್ಪ ಹೇಳಿದರು.
ನಿವೃತ್ತ ಪ್ರಾಂಶುಪಾಲಪಾದ ಡಾ. ಯಶೋಧ ರಾಮಚಂದ್ರ ಪ್ರಧಾನ ಭಾಷಣ ಮಾಡಿದರು. ಕುರುಂಜಿಯವರು ಕನಸು ಕಂಡು ಅದನ್ನು ನನಸು ಮಾಡುವ ಮೂಲಕ ಸುಳ್ಯದ ಚಾರಿತ್ರಿಕ ಬದಲಾವಣೆಗೆ ಕಾರಣರಾದರು. ಅವರಿಂದ ಪ್ರೇರಣೆ ಪಡೆದ ಶಹೀದ್ ಅವರು ಕೂಡಾ ಸಮಾಜಮುಖಿ ಚಿಂತನೆಯಿಂದ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಾರೆ ಎಂದವರು ಹೇಳಿದರು.
ಮಾಜಿ ಸಚಿವೆ ಶ್ರೀಮತಿ ರಾಣಿ ಸತೀಶ್ ತರಗತಿ ಕೋಣೆ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ವಸ್ತು ಪ್ರದರ್ಶನ ಉದ್ಘಾಟಿಸಿದರು. ನಿವೃತ್ತ ಸಹಾಯಕ ಆಯುಕ್ತ ಎ.ಜಿ ವೆಂಕಟರಮಣ, ಮಾಜಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಪ್ರಫುಲ್ಲಾ ಮಧುಕರ್, ಕೆ.ಎಫ್.ಡಿ.ಸಿ. ನಿರ್ದೇಶಕ ವೆಂಕಟೇಶ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಿ.ಕೆ ಹಮೀದ್ , ಷಣ್ಮುಗಂ, ನಾಗೇಶ್ ಪಿ.ಆಎರ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ಎಂ.ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಕೆ.ಎಸ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ದಾಮೋದರ ಕೆ., ದಶಮಾನೋತ್ಸವ ಸಮಿತಿ ಅಧ್ಯಕ್ಷ ತೀರ್ಥರಾಮ ಯು.ಕೆ., ಆರ್ಥಿಕ ಸಮಿತಿ ಅಧ್ಯಕ್ಷ ದಿನಕರ ಸಣ್ಣಮನೆ, ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಕುಂಞಿ ಕೊಯನಾಡು, ವಿವಿಧ ಸಮಿತಿಗಳ ಆಧ್ಯಕ್ಷರುಗಳಾದ ಬಿ.ಎಸ್.ಕಾಂತಿ, ಕಿಶೋರ್ ಬಿ.ಎಸ್., ಬಿಂದು ಸುರೇಶ್ ತೊಡಿಕಾನ, ಗೋಪಾಲಕೃಷ್ಣ ಬಿಳಿಯಾರು, ತಾರಾ ನಿತ್ಯಾನಂದ, ರಾಮಕೃಷ್ಣ ಕೆ.ಬಿ.ಸಂಪಾಜೆ, ಸುಕುಮಾರ ಉಳುವಾರು, ನಿವೃತ್ತ ದೈಹಿಕ ಶಿಕ್ಷಕ ದೇವಯ್ಯ ಮಾಸ್ತರ್, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಹರಿಣಾಕ್ಷಿ ಕೆ.ಎಸ್. ಸ್ವಾಗತಿಸಿ ಶಿಕ್ಷಕಿ ಸುಜಾತ ವಂದಿಸಿದರು. ದಯಾನಂದ ಪತ್ತುಕುಂಜ ಮತ್ತು ಜಯಾನಂದ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.