ಬಿ ಎಸ್ ಎನ್ ಎಲ್ 50 ರೂಪಾಯಿ 20GB 3G ಇಂಟರ್ನೆಟ್ ಸೇವೆ ನೀಡುವುದಿಲ್ಲ !
Update: 2016-04-23 18:11 IST
ಹೊಸದಿಲ್ಲಿ , ಎ. 23: ಇತ್ತೀಚಿಗೆ ಹಬ್ಬಿದ್ದ ವದಂತಿಗಳನ್ನು ನಂಬಿ ನಿಮ್ಮ ಮೊಬೈಲ್ ಸೇವಾ ಕಂಪೆನಿಯನ್ನು ಬದಲಾಯಿಸಿ ಬಿ ಎಸ್ ಎನ್ ಎಲ್ ಸಿಮ್ ತೆಗೆದುಕೊಳ್ಳಲು ನಿರ್ಧರಿಸಿದ್ದರೆ ಸ್ವಲ್ಪ ನಿಲ್ಲಿ !
ಬಿ ಎಸ್ ಎನ್ ಎಲ್ 20GB 3G ಇಂಟರ್ನೆಟ್ ಸೇವೆಯನ್ನು ಕೇವಲ 50 ರೂಪಾಯಿಗೆ ನೀಡಲಿದೆ ಎಂದು ನಿಮಗೆ ಯಾರಾದರೂ ಹೇಳಿದ್ದರೆ ಅದು ಸುಳ್ಳು. ಏಕೆಂದರೆ ಅಂತಹ ಯಾವುದೇ ಆಫ಼ರ್ ಸದ್ಯಕ್ಕೆ ಬಿ ಎಸ್ ಎನ್ ಎಲ್ ನೀಡುತ್ತಿಲ್ಲ. ಈ ಬಗ್ಗೆ ಅದು ಅಧಿಕೃತ ಹೇಳಿಕೆಯನ್ನು ಇನ್ನಷ್ಟೇ ನೀಡಬೇಕಿದೆ. ಆದರೆ ಈ ಆಫ಼ರ್ ಇಲ್ಲ ಎಂಬುದನ್ನು ಮೂಲಗಳು ಖಚಿತ ಪಡಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇತ್ತೀಚಿಗೆ ಕೆಲವು ವೆಬ್ ಸೈಟ್ ಗಳು ಬಿ ಎಸ್ ಎನ್ ಎಲ್ ಇಂತಹದೊಂದು ಆಕರ್ಷಕ ಆಫ಼ರ್ ನೀಡುತ್ತಾರೆ ಎಂದು ವರದಿ ಮಾಡಿದ್ದವು. ತಕ್ಷಣ ಅದು ಬಿರುಗಾಳಿಯಂತೆ ಎಲ್ಲೆಡೆ ಹಬ್ಬಿತು . ಆದರೆ ಈಗ ಅದು ಸುಳ್ಳು ಎಂದು ತಿಳಿದು ಬಂದಿದೆ.