ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದ ವೈದ್ಯನ ಹತ್ಯೆ
ಉಧಮಸಿಂಗ ನಗರ(ಉತ್ತರಾಖಂಡ),ಎ.23: ತನ್ನ ಅನಾರೋಗ್ಯ ಪೀಡಿತ ಮಗುವಿನ ಸಾವಿನಿಂದ ಆಕ್ರೋಶಗೊಂಡಿದ್ದ ವ್ಯಕ್ತಿಯೋರ್ವ ಅದಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದ್ದ ಜಾಸ್ಪುರ ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಞವೈದ್ಯರೋರ್ವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಡಾ.ಎಸ್.ಕೆ.ಸಿಂಗ್ ಹತ ವೈದ್ಯರಾಗಿದ್ದು, ರೌಡಿ ಶೀಟರ್ ಮಾಣಿಕ್ ರಥೀ ಆರೋಪಿಯಾಗಿದ್ದಾನೆ ಎಂದು ಎಸ್‌ಎಸ್‌ಪಿ ಶಂಕರ ತಕ್ವಾಲೆ ತಿಳಿಸಿದರು. ರಥೀ ವಿರುದ್ಧ ಅರ್ಧ ಡಝನ್ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಆತನ ಒಂದೂವರೆ ವರ್ಷದ ಪುತ್ರ ಅತಿಸಾರದಿಂದ ಬಳಲುತ್ತಿದ್ದು, ಡಾ.ಸಿಂಗ್ ಚಿಕಿತ್ಸೆ ನೀಡುತ್ತಿದ್ದರು. ಎ.18ರಂದು ರಾತ್ರಿ ಮಗನ ಸ್ಥಿತಿ ತೀರ ಹದಗೆಟ್ಟಿದ್ದರಿಂದ ರಥೀ ಡಾ.ಸಿಂಗ್ ನಿವಾಸಕ್ಕೆ ತೆರಳಿದ್ದ. ಆದರೆ ಡಾ.ಸಿಂಗ್ ಆತನ ಪುತ್ರನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರೆನ್ನಲಾಗಿದ್ದು ಆ ಬಳಿಕ ರಥೀ ಹಲವಾರು ವೈದ್ಯರನ್ನು ಸಂಪರ್ಕಿಸಿದ್ದ. ಅಂತಿಮವಾಗಿ ಎ.19ರಂದು ಆತನ ಪುತ್ರ ಕೊನೆಯುಸಿರೆಳೆದಿದ್ದ.
ಪುತ್ರನ ಸಾವಿನಿಂದ ಆಕ್ರೋಶಿತ ರಥೀ ತನ್ನ ಭಾವ ಶಿವಂ ತ್ಯಾಗಿ ಜೊತೆ ಸೇರಿ