ಬದಿಯಡ್ಕ: ಗಾಂಜಾ ಮಾರಾಟವನ್ನು ತಡೆದ ಎಂ ಎಸ್ ಎಫ್ ವಿದ್ಯಾರ್ಥಿ ನಾಯಕನಿಗೆ ಹಲ್ಲೆ
Update: 2016-04-23 19:19 IST
ಮಂಜೇಶ್ವರ : ಗಾಂಜಾ ಮಾರಾಟವನ್ನು ತಡೆದಿರುವುದಾಗಿ ಆರೋಪಿಸಿ ತಂಡವೊಂದು ಎಂ ಎಸ್ ಎಫ್ ವಿದ್ಯಾರ್ಥಿ ನಾಯಕನೊಬ್ಬನಿಗೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ.
ಬದಿಯಡ್ಕ ಪಂಚಾಯತು ಎಂ ಎಸ್ ಎಫ್ ಕೋಶಾಧಿಕಾರಿ ಚರ್ಲಡ್ಕ ನಿವಾಸಿ ರಿಫಾಯಿ (22) ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಈತನನ್ನು ಸಮೀಪದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಸ್ಥಳೀಯ ಮಸೀದಿಯೊಂದರಲ್ಲಿ ನಡೆಯುತಿದ್ದ ಮತ ಪ್ರಭಾಷಣೆಗಾಗಿ ಹೊರಡಲು ತಯಾರಾಗಿ ಶುಕ್ರವಾರ ರಸ್ತೆ ಬದಿಯಲ್ಲಿ ನಿಂತಿರುವಾಗ ಬೈಕ್ ನಲ್ಲಿ ಆಗಮಿಸಿದ ಇಬ್ಬರ ತಂಡವೊಂದು ಏಕಾಏಕಿಯಾಗಿ ಹಲ್ಲೆಗೈದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಗಾಂಜಾ ಮಾರಾಟದ ಬಗ್ಗೆ ಊರವರಿಗೆ ಮಾಹಿತಿ ನೀಡಿರುವುದಾಗಿ ಆರೋಪಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.