×
Ad

ಲೈಂಗಿಕ ಕಿರುಕುಳ-ಇಬ್ಬರ ವಿರುದ್ದ ದೂರು ದಾಖಲು

Update: 2016-04-23 19:22 IST

ಮಂಜೇಶ್ವರ : ಅಪ್ರಾಪ್ತ ಹದಿನೈದರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಈರ್ವರ ವಿರುದ್ದ ಆದೂರು ಪೋಲೀಸರು ದೂರು ದಾಖಲಿಸಿದ್ದಾರೆ.

ಕರ್ಮಂತೋಡಿ ಬಳಿಯ ಸಂಜೀವನ್(34),ಕೃಷ್ಣ (30) ಎಂಬವರ ವಿರುದ್ದ ದೂರು ದಾಖಲಿಸಲಾಗಿದೆಯೆಂದು ಪೋಲೀಸರು ತಿಳಿಸಿದ್ದಾರೆ.
ಬಾಲಕಿಗೆ ಕಿರುಕುಳಕ್ಕೊಳಗಾದ ಬಗ್ಗೆ ತಾಯಿಗೆ ವಿಷಯ ತಿಳಿದು ಬಂದಿದ್ದು ಈ ಬಗ್ಗೆ ಅವರು ಚೈಲ್ಡ್ ಲೈನ್ ಗೆ ೂರು ನೀಡಿದ್ದರು.ಬಳಿಕ ಚೈಲ್ಡ್ ಲೈನ್ ಅಧಿಕೃತರು ಪೋಲೀಸರಿಗೆ ನೀಡಿದ ನಿರ್ದೇಶಾನುಸಾರ ದೂರು ದಾಖಲಿಸಿಕೊಳ್ಳಲಾಗಿದೆಯೆಂದು ಪೋಲೀಸರು ತಿಳಿಸಿದ್ದಾರೆ.ಕಳೆದ ಒಂದು ವರ್ಷದಿಂದ ನಿರಂತರ ಕಿರುಕುಳ ನೀಡಲಾಗಿದೆಯೆಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News