ಬದಿಯಡ್ಕ: ತೆಂಗಿನ ಮರ ಬಿದ್ದು ಮನೆಗೆ ಹಾನಿ
Update: 2016-04-23 19:25 IST
ಮಂಜೇಶ್ವರ: ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು ವ್ಯಾಪಕ ನಾಶನಷ್ಟ ಸಂಭವಿಸಿದೆ.
ಕಾಡಮನೆ ಬಳಿಯ ಮಾಡತ್ತಡ್ಕ ನಿವಾಸಿ ರಾಘವನ್ ಎಂಬವರ ಹೆಂಚಿನ ಮನೆಗೆ ಶನಿವಾರ ಬೆಳಿಗ್ಗೆ ತೆಂಗಿನ ಮರ ಮುರಿದು ಬಿದ್ದಿದೆ.ಇದರಿಂದ ಮನೆಗೆ ಆಂಶಿಕ ಹಾನಿಯಾಗಿದೆ.ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ.ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ ಪ್ರಭು ಸ್ಥಳ ಸಂದರ್ಶನ ನಡೆಸಿದ್ದಾರೆ.