ಹುಚ್ಚು ಬೆಕ್ಕಿನ ರಂಪಾಟ: ಹಲವರು ಆಸ್ಪತ್ರೆಗೆ
Update: 2016-04-23 19:30 IST
ಮಂಜೇಶ್ವರ : ಹುಚ್ಚು ಬೆಕ್ಕೊಂದು ಹಲವು ಮಂದಿಗೆ ಕಚ್ಚಿ ಆತಂಕ ಸೃಷ್ಟಿಸಿದ ಘಟನೆ ಪೈವಳಿಕೆ ಸಮೀಪದ ಬಳ್ಳೂರು ಪ್ರದೇಶದ ಪರಿಸರದಲ್ಲಿ ಸಂಭವಿಸಿದೆ.
ಬಾಯಾರು ಸಮೀಪದ ಬಳ್ಳೂರು ಪರಿಸರದಲ್ಲಿ ಹುಚ್ಚು ಬೆಕ್ಕೊಂದು ನಾಗರಿಕರ ಮೇಲೆರಗಿ ಸುಮಾರು ಎಂಟು ಮಂದಿ ಗಾಯಗೊಂಡಿದ್ದಾರೆ. ಬಳ್ಳೂರು ನಿವಾಸಿಗಳಾದ ಕಾಂತಪ್ಪ ಪೂಜಾರಿ, ವೆಂಕಟ್ರಮಣ ಆಚಾರ್ಯ, ಸುಬ್ರಮಣ್ಯ ಭಟ್ ಸಹಿತ 8 ಮಂದಿಗೆ ಬೆಕ್ಕು ಕಚ್ಚಿ ಗಾಯಗೊಳಿಸಿದೆ.
ಗಾಯಾಳುಗಳು ಬಾಯಾರು ಸಮುದಾಯ ಆರೋಗ್ಯ ಕೇಂದ್ರ ಸಿ ಎಚ್ ಸಿ ಯಲ್ಲಿ ದಾಖಲಾಗಿ ಚುಚ್ಚುಮದ್ದನ್ನು ಪದಕೊಂಡಿದ್ದಾರೆ. ಎರಡು ದಿವಸಗಳಿಂದ ಬೆಕ್ಕು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಊರವರು ಬೆಕ್ಕನ್ನು ಹಿಡಿದು ಕೊಂದಿದ್ದಾರೆ. ಹುಚ್ಚು ನಾಯಿ ಕಚ್ಚಿ ಬೆಕ್ಕಿಗೆ ಹುಚ್ಚು ಹಿಡಿದಿರಬಹುದಾಗಿ ಶಂಕಿಸಲಾಗಿದೆ.