×
Ad

ನಕಲಿ ‘ಜೆಎನ್‌ಯು’ ಟೇಪ್‌ಗಳನ್ನು ಪ್ರಸಾರಿಸಿದ್ದ ಮೂರು ಸುದ್ದಿವಾಹಿನಿಗಳ ವಿರುದ್ಧ ಕ್ರಮ

Update: 2016-04-23 19:49 IST

ಹೊಸದಿಲ್ಲಿ,ಎ.23: ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಲಾಗಿದ್ದ ಫೆ.9ರ ಜೆಎನ್‌ಯು ಘಟನೆಯ ನಕಲಿ ವೀಡಿಯೊಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮೂರು ಸುದ್ದಿವಾಹಿನಿಗಳ ವಿರುದ್ಧ ದಿಲ್ಲಿ ಸರಕಾರವು ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಪಟಿಯಾಲಾ ಹೌಸ್ ನ್ಯಾಯಾಲಯವು ನಡೆಸಲಿದೆ.

ಈ ಹಿಂದೆ ವಿವಾದಾತ್ಮಕ ಜೆಎನ್‌ಯು ಘಟನೆಯ ವೀಡಿಯೊಗಳ ಕುರಿತು ಕೇಜ್ರಿವಾಲ್ ಸರಕಾರವು ಆದೇಶಿಸಿದ್ದ ಮ್ಯಾಜಿಸ್ಟ್ರೇಟ್ ತನಿಖಾ ವರದಿಯು,‘ಪಾಕಿಸ್ತಾನ ಜಿಂದಾಬಾದ್ ’ಎಂಬ ಘೋಷಣೆಗಳನ್ನು ಕೂಗಲಾಗಿರಲಿಲ್ಲ ಮತ್ತು ಹಿಂಸೆಯನ್ನು ಪ್ರಚೋದಿಸುವ ಶಬ್ದಗಳನ್ನು ಸೇರಿಸಲಾಗಿದೆ ಎಂದು ಹೇಳಿತ್ತು.

ಜೆಎನ್‌ಯು ಕಾರ್ಯಕ್ರಮದಲ್ಲಿ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದ ಕೆಲವು ಜನರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಪ್ರಸಾರಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News