×
Ad

ಮುಡಿಪು: ಧರ್ಮಜಾಗೃತಿ ವೇದಿಕೆಯಿಂದ ಹೊರಕಾಣಿಕೆ ಮೆರವಣಿಗೆ ಶನಿವಾರ ನಡೆಯಿತು

Update: 2016-04-23 20:27 IST

ಕೊಣಾಜೆ: ಧರ್ಮಜಾಗೃತಿ ವೇದಿಕೆ ಮುಡಿಪು ಇದರ ಆಶ್ರಯದಲ್ಲಿ ಎ.24ರಂದು ಭಾನುವಾರ ನಡೆಯಲಿರುವ ಶ್ರೀ ಸತ್ಯನಾರಾಯಣ ಪೂಜೆ, ಶಿವಪೂಜೆ, ಸ್ವಯಂವರ ಪಾರ್ವತಿ ಪೂಜೆ, ಸರಳ ಆದರ್ಶವಿವಾಹ ಸಮಾರಂಭಕ್ಕೆ ಹೊರೆಕಾಣಿಕೆ ಮೆರವಣಿಗೆಯು ಶನಿವಾರ ಮುಡಿಪುವಿನಲ್ಲಿ ನಡೆಯಿತು.

ಮುಡಿಪುವಿನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹೊರಟ ಹೊರೆಕಾಣಿಕೆ ಮೆರವಣಿಯನ್ನು ಧರ್ಮಜಾಗೃತಿ ವೇದಿಕೆಯ ಗೌರವ ಸಲಹೆಗಾರ ಟಿ.ಜಿ.ರಾಜಾರಾಂ ಭಟ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಧರ್ಮಜಾಗೃತಿ ವೇದಿಕೆಯ ಮಾರ್ಗದರ್ಶಕರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಅಧ್ಯಕ್ಷರಾದ ನವೀನ್ ಕುಮಾರ್ ಪಾದಲ್ಪಾಡಿ, ಕಾರ್ಯದರ್ಶಿ ದಿನಕರ ಎ, ಸಂದೇಶ್ ಎಂ, ಮುಡಿಪ್ಪಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ಕೊಡಕ್ಕಲ್ಲು ಮುರಳಿ ಮೋಹನ ಭಟ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News