×
Ad

ಮಂಗಳೂರು :ಎ.25 ರಿಂದ ಎ.28 ರವರೆಗೆ ಮುಹಿಯುದ್ದೀನ್ ಹೊಸ ಜುಮಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕೋತ್ಸವ

Update: 2016-04-23 20:49 IST

ಮಂಗಳೂರು, ಎ.23:ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಮತ್ತು ನೂರಾನಿಯ ಜಮಾತ್ ಕಮಿಟಿ ಜೋಕಟ್ಟೆ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಬೃಹತ್ ಸ್ವಲಾತ್ ವಾರ್ಷಿಕೋತ್ಸವ ಧಾರ್ಮಿಕ ಮತ ಪ್ರಭಾಷಣ ಎ.25 ರಿಂದ ಎ.28 ರವರೆಗೆ ನೂರಾನಿಯಾ ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

   ಎ.25 ರಂದು ಸೋಮವಾರ ರಾತ್ರಿ 8.15 ಕ್ಕೆ ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಜೋಕಟ್ಟೆಯ ಖತೀಬ್ ಮತ್ತು ಮುದರ್ರಿಸ್ ಬಹು. ಇ.ಎಂ. ಅಬ್ದುರ್ರಹ್‌ಮಾನ್ ದಾರಿಮಿ ಅಲ್‌ಹಾಮಿದಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹದಗೆಡುತ್ತಿರುವ ಯುವ ಸಮೂಹ ಎಂಬ ವಿಷಯದಲ್ಲಿ ಕುಂತೂರು ಖತೀಬ್ ಬಹು.ಅಬ್ದುರ್ರಶೀದ್ ರಹ್ಮಾನಿ ಕುಂತೂರು ಮತಪ್ರಭಾಷಣ ಮಾಡಲಿದ್ದಾರೆ.

    ಎ.26 ರಂದು ರಾತ್ರಿ 8.15ಕ್ಕೆ ನರಕದ ಭಯಾನಕತೆ ವಿಷಯದಲ್ಲಿ ಕೇರಳದ ಬಹು. ವಯಗೂರ್ ಮುಹಮ್ಮದ್ ಮುಸ್ಲಿಯಾರ್ ಮತಪ್ರಭಾಷಣ ಮಾಡಲಿದ್ದಾರೆ. ಎ.27 ರಂದು ರಾತ್ರಿ 8.15ಕ್ಕೆ ಅಲ್ಲಾಹುವಿನ ಸಮಿಪ ದೃಷ್ಠಿ ವಿಷಯದಲ್ಲಿ ಬಹು.ಹಸನ್ ಮುಸ್ಲಿಯಾರ್, ಮಲಪ್ಪುರಂ ಅವರು ಮತಪ್ರಭಾಷಣ ಮಾಡಲಿದ್ದಾರೆ. ಎ.28 ರಂದು ಮಗ್‌ರಿಬ್ ನಮಾಝಿನ ಬಳಿಕ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಸಭಾ ಕಾರ್ಯಕ್ರಮವು ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್‌ಬುಖಾರಿ ಬಾಯಾರ್ ನೇತೃತ್ವದಲ್ಲಿ ನಡೆಯಲಿದೆ. ಅದೇ ದಿನ ಸ್ವಲಾತಿನ ಮಹತ್ವ ವಿಷಯದ ಬಗ್ಗೆ ಬದ್ರಿಯಾ ಜುಮಾ ಮಸೀದಿ 7 ನೇ ಬ್ಲಾಕ್ ಕೃಷ್ಣಾಪುರ ಖತೀಬ ಬಹು. ಉಮರುಲ್ ಫಾರೂಖ್ ಸಖಾಫಿ ಮತಪ್ರಭಾಷಣ ಮಾಡಲಿದ್ದಾರೆ. 9 ಗಂಟೆಗೆ ಜರುಗಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಜೋಕಟ್ಟೆಯ ಖತೀಬ್ ಮತ್ತು ಮುದರ್ರಿಸ್ ಬಹು. ಇ.ಎಂ. ಅಬ್ದುರ್ರಹ್‌ಮಾನ್ ದಾರಿಮಿ ಅಲ್‌ಹಾಮಿದಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಲ್ ಮುಝೈನ್ ಸೌದಿ ಅರೇಬಿಯಾದ ಮಾಲಕರಾದ ಜ.ಹಾಜಿ.ಬಿ.ಝಕಾರಿಯಾ, ಜ.ಹಾಜಿ.ಬಿ.ಶರೀಫ್ , ಅಲ್ -ಅಶ್ಶಾ ಕೆ.ಎಸ್.ಎ ಜ.ಹಾಜಿ ಅಬ್ದುಲ್ ಬಶೀರ್ ಮೇಗಿನ ಮನೆ , ಜ.ಶೇಕುಂಞಿ ಅಲ್ ಸಲಾಂ ರಿಯಾದ್ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಳೆ ಜುಮಾ ಮಸೀದಿ ಜೋಕಟ್ಟೆ ಖತೀಬ್ ಬಹು. ಎ.ಎಂ. ಅಬ್ದುಲ್ಲಾ ಮದನಿ, ಅಧ್ಯಕ್ಷ ಜ. ಒ.ಎಂ. ಅಬ್ದುಲ್ ಖಾದರ್, ಈದ್ಗಾ ಜುಮಾ ಮಸೀದಿ ಜೋಕಟ್ಟೆಯ ಖತೀಬ್ ಬಹು.ಅಬ್ದುಲ್ಲಾಹಿ ನಯೀಮಿ, ಅಂಜುಮನ್ ಖುವ್ವತುಲ್ ಇಸ್ಲಾಂ ಜೋಕಟ್ಟೆಯ ಅಧ್ಯಕ್ಷ ಜ.ಹಾಜಿ ಬಿ.ಎ. ಅಬ್ದುಲ್ ರಶೀದ್, ಜೋಕಟ್ಟೆ ತಾಲೂಕು ಪಂಚಾಯತ್ ಸದಸ್ಯ ಜ.ಬಿ.ಎಸ್. ಬಶೀರ್ ಅಹ್‌ಮದ್, ಜೋಕಟ್ಟೆ ಗ್ರಾ.ಪಂ ಉಪಾಧ್ಯಕ್ಷ ಜ.ಸಂಶುದ್ದೀನ್ ಜಮಾತ್ ಉಪಸ್ಥಿತರಿರುವರು ಎಂದು ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಮತ್ತು ನೂರಾನಿಯಾ ಜಮಾಅತ್ ಕಮಿಟಿ ಜೋಕಟ್ಟೆಯ ಪ್ರ.ಕಾರ್ಯದರ್ಶಿ ಹಾಜಿ ಎಂ. ಶೇಖ್ ಹಸನ್, ಅಧ್ಯಕ್ಷ ಹಾಜಿ. ಜೆ.ಮುಹಮ್ಮದ್ ಮತ್ತು ಸ್ವಲಾತ್ ಸ್ವಾಗತ ಸಮಿತಿಯ ಸಂಚಾಲಕ ಜ.ಮುಹಮ್ಮದ್ ಅರಿಕೆರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News