ಅಮೆರಿಕ ತಲುಪಿದ ಭಾರತದ ಯುದ್ಧ ವಿಮಾನಗಳು
Update: 2016-04-23 21:28 IST
ವಾಶಿಂಗ್ಟನ್, ಎ. 23: ಅಮೆರಿಕ-ಭಾರತದ ಜಂಟಿ ವಾಯು ಸೇನಾಭ್ಯಾಸ ‘ರೆಡ್ ಫ್ಲಾಗ್’ನಲ್ಲಿ ಭಾಗವಹಿಸುವುದಕ್ಕಾಗಿ ಭಾರತೀಯ ವಾಯುಪಡೆಯ 12 ವಿಮಾನಗಳು ಅಮೆರಿಕವನ್ನು ತಲುಪಿವೆ.
ಭಾರತದ ಯುದ್ಧ ವಿಮಾನಗಳು ಬಹ್ರೈನ್, ಈಜಿಪ್ಟ್, ಫ್ರಾನ್ಸ್, ಪೋರ್ಚುಗಲ್ ಮತ್ತು ಕೆನಡ ಮಾರ್ಗವಾಗಿ ಅಲಾಸ್ಕದ ಈಲ್‌ಸನ್ ವಾಯುಪಡೆ ನೆಲೆಯನ್ನು ತಲುಪಿವೆ.
ನ್ಯಾಟೊ ಪಡೆಗಳೊಂದಿಗೆ ಭಾರತೀಯ ಸೈನಿಕರ ಸಮರಾಭ್ಯಾಸ ಎಪ್ರಿಲ್ 28ರಂದು ಆರಂಭಗೊಳ್ಳಲಿದೆ.
ನಾಲ್ಕು ಸುಖೋಯ್, ನಾಲ್ಕು ಡೀಪ್ ಪೆನಟ್ರೇಶನ್ ಜಾಗ್ವಾರ್, ಎರಡು ಸಿ17 ಸಾರಿಗೆ ವಿಮಾನಗಳು ಮತ್ತು ಆಕಾಶದಲ್ಲಿ ಇಂಧನ ತುಂಬಿಸುವ ಎರಡು ಐಎಲ್78 ವಿಮಾನಗಳು ಸುದೀರ್ಘ ಹಾದಿಯನ್ನು ಸವೆಸಿ ಅಮೆರಿಕದ ತಮ್ಮ ಗುರಿಯನ್ನು ತಲುಪಿವೆ.
150ಕ್ಕೂ ಅಧಿಕ ವಾಯು ಸೈನಿಕರು ಪಾಲ್ಗೊಳ್ಳಲಿದ್ದಾರೆ. ಈ ಸಮರಾಭ್ಯಾಸಕ್ಕೆ 100 ಕೋಟಿ ರೂ.ಗೂ ಅಧಿಕ ವೆಚ್ಚ ತಗಲಲಿದೆ.