ಮಂಗಳೂರು: ಗಾಂಜಾ ಸೇವನೆ - ಒರ್ವನ ಬಂಧನ
Update: 2016-04-23 22:22 IST
ಮಂಗಳೂರು, ಎ.23:ನಗರದ ಕಾವೂರಿನ ಗಾಂಧಿನಗರದಲ್ಲಿ ಗಾಂಜಾ ಸೇವಿಸಿದ್ದ ಒರ್ವ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಗಾಂಧಿನಗರ ನಿವಾಸಿ ಬಿಲಾಲ್ (26) ಎಂದು ಗುರುತಿಸಲಾಗಿದೆ. ಕಾವೂರು ಇನ್ಸ್‌ಪೆಕ್ಟರ್ ರೌಂಡ್ಸ್‌ನಲ್ಲಿ ಇದ್ದ ಸಂದರ್ಭದಲ್ಲಿ ಗಾಂಧಿನಗರದಲ್ಲಿ ಇದ್ದ ಬಿಲಾಲ್ ಬಗ್ಗೆ ಅನುಮಾನಗೊಂಡು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತ ಗಾಂಜ ಸೇವಿಸಿರುವ ಬಗ್ಗೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ನಾರ್ಕೋಟಿಕ್ ಡ್ರಗ್ಸ್ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.