ಮಲ್ಯ ಪಾಸ್‌ಪೋರ್ಟ್ ರದ್ದುಗೊಳಿಸಿದ ವಿದೇಶಾಂಗ ಇಲಾಖೆ
Update: 2016-04-24 11:19 IST
ಹೊಸದಿಲ್ಲಿ, ಎ.24: ಬ್ಯಾಂಕ್‌ಗಳಿಗೆ 9,500 ಕೋಟಿ. ರೂ. ಸಾಲ ಮರುಪಾವತಿ ಮಾಡದೆ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಪಾಸ್‌ಪೋರ್ಟ್‌ನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ರದ್ದುಪಡಿಸಿದೆ.
ಬ್ಯಾಂಕ್ ಬ್ಯಾಂಕ್‌ಗಳಿಂದ ಭಾರೀ ಮೊತ್ತದ ಸಾಲ ಪಡೆದಿರುವ ವಿಚಾರಕ್ಕೆ ಸಂಬಂಧಿಸಿ ವಿಜಯ ಮಲ್ಯ ಅವರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿತ್ತು. ಆದರೆ ಲಂಡನ್‌ಗೆ ಪರಾರಿಯಗಿರುವ ಮಲ್ಯ ಹಾಜರಾಗಲಿಲ್ಲ.ಸಾಲ ಮರುಪಾವತಿ ಮಾಡದಿರುವ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕ್‌ಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ.