×
Ad

ಕಾಸರಗೋಡು : ಎ. 25ರಿಂದ ವಿದ್ಯುತ್ ವ್ಯತ್ಯಯ

Update: 2016-04-24 11:29 IST

ಕಾಸರಗೋಡು, ಎ. 24 : ನಗರ ಹೊರವಲಯದ  ವಿದ್ಯಾನಗರ ಸಬ್ ಸ್ಟೇಶನ್ ನ  ಸಾಮಾರ್ಥ್ಯ ಹೆಚ್ಚಳ ಮತ್ತು ದುರಸ್ತಿ ಹಿನ್ನೆಲೆಯಲ್ಲಿ   ಎ. 25ರಿಂದ  ಆರು ದಿನಗಳ ಕಾಲ  ಕಾಸರಗೋಡು ನಗರ ಮತ್ತು ಹೊರವಲಯದಲ್ಲಿ ಸತತ  ವಿದ್ಯುತ್ ಮೊಟಕುಗೊಳ್ಳಲಿದೆ.

ಆದರೆ ಯಾವ ಸಮಯದಲ್ಲಿ ವಿದ್ಯುತ್ ಮೊಟಕು ಗೊಳ್ಳಲಿದೆ ಎಂಬ ಬಗ್ಗೆ ವಿದ್ಯುತ್ ಮಂಡಲಿ ಸ್ಪಷ್ಟಪಡಿಸಿಲ್ಲ. ಎಪ್ರಿಲ್ 30 ರ ತನಕ ಆರು ದಿನ ಹಗಲು - ರಾತ್ರಿ ವಿದ್ಯುತ್ ಮೊಟಕು ಗೊಳ್ಳಲಿದೆ  ಎಂದು ಪ್ರಕಟಣೆ ತಿಳಿಸಿದೆ. 
 ಸತತ ವಿದ್ಯುತ್ ಮೊಟಕು  ಬಿಸಿಲ ಝಳದಿಂದ ಬಳಲುತ್ತಿರುವ ಜನ ಸಾಮಾನ್ಯರು  ಮತ್ತಷ್ಟು ಸ೦ಕಷ್ಟಕ್ಕೆ  ಸಿಲುಕುವಂತಾಗಲಿದೆ.  ಉದ್ಯಮಗಳು ಮುಚ್ಚುವ ಸ್ಥಿತಿ ಬರಲಿದೆ . ಸರಕಾರಿ ಕಛೇರಿಗಳಲ್ಲಿ ಕೆಲಸ ನಿಶ್ಚಲವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News