ಬೆಳಂದೂರು ನಿವಾಸಿ ನಾಪತ್ತೆ
Update: 2016-04-24 14:05 IST
ಪುತ್ತೂರು, ಎ. 24: ಬೆಳಂದೂರು ಗ್ರಾಮದ ಬೆಳಂದೂರು ಎಂಬಲ್ಲಿಂದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.
ಬೆಳಂದೂರು ನಿವಾಸಿ ಕುಂಞಬ್ಬ ಎಂಬವರ ಪುತ್ರ ಅಬ್ಬಾಸ್ (45) ಕಳೆದ ಇಪ್ಪತ್ತು ದಿನಗಳಿಂದ ನಾಪತ್ತೆಯಾಗಿರುವುದಾಗಿ ಪ್ರಕರಣ ದಾಖಲಾಗಿದೆ. ಚಾಲಕ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅಬ್ಬಾಸ್ ಎ. 3 ರಂದು ಮುಂಬೈಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಬಳಿಕ ಅವರ ಮೊಬೈಲ್ ಸಂಪರ್ಕಿಸಲು ಸಿಗುತ್ತಿಲ್ಲ. ಮಾತ್ರವಲ್ಲ ಸ್ವ್ವಿಚ್ ಆಫ್ ಪ್ರತಿಕ್ರಿಯೆ ಬರುತ್ತದೆ.
ಮನೆಯಲ್ಲಿ ತಂದೆ, ತಾಯಿ, ಪತ್ನಿ ಹಾಗೂ ಮಕ್ಕಳಿದ್ದು ಇವರೆಲ್ಲಾ ಗಾಬರಿಗೊಂಡು ಎಲ್ಲೆಡೆ ಸಂಬಂಧಿಕರು ಹಾಗೂ ಪರಿಚಿತರಲ್ಲಿ ವಿಚಾರಿಸಿ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಬ್ಬಾಸ್ ಅವರ ಅಣ್ಣ ಅಬ್ದುಲ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಅಬ್ಬಾಸ್ ಅವರ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಪೋಲೀಸರು ತಿಳಿಸಿದ್ದಾರೆ.