×
Ad

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಶೇ. 40ರಷ್ಟು ಮತದಾನ

Update: 2016-04-24 14:16 IST

ಬಂಟ್ವಾಳ, ಎ. 24: ವಿಟ್ಲ ಪಟ್ಟಣ ಪಂಚಾಯತ್ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲನೆ ಬಾರಿಗೆ ಇಂದು ಚುನಾವಣೆ ನಡೆಯುತ್ತಿದ್ದು ಬಿಸಿಲ ಝಲದ ನಡುವೆಯೂ 12 ಗಂಟೆಯ ಸುಮಾರಿಗೆ ಶೇಕಡಾ 40ರಷ್ಟು ಮತದಾನ ವಾಗಿದೆ. 

ರವಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 11 ಗಂಟೆಯ ಸುಮಾರಿಗೆ ಶೇಕಡ 32ರಷ್ಟು ಮತದಾನವಾಗಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇಕಡಾ 40ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾರರು ಉತ್ಸಾಹದಿಂದ ಮತ ಚಾಲಾಯಿಸುತ್ತಿರುವ ದ್ರಶ್ಯ ಕಂಡು ಬಂದರೆ, ನೆತ್ತಿಸುಡುವ ಬಿಸಿಲಿನಿಂದಾಗಿ ಮಧ್ಯಾಹ್ನದ ಹೊತ್ತಿಗೆ ಮತಾದರರಿಲ್ಲದೆ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಆಗೊಮ್ಮೆ ಈಗೊಮ್ಮೆ ಒಂದಿಬ್ಬರು ಬಂದು ಮತ ಚಾಲಯಿಸುತ್ತಿದ್ದಾರೆ. 

ಮುಂಜಾಗ್ರತ ಕ್ರಮವಾಗಿ ಮತಗಟ್ಟೆಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುಡು ಬಿಸಿಲಿನಿಂದಾಗಿ ಮತಗಟ್ಟೆ ಹೊರಭಾಗದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಟೆಂಟ್ ನೊಳಗೆ ಕೂತು ಮತದಾರರ ಬರುವಿಗಾಗಿ ಕಾಯುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News